ಬೆಳಕು ಹಂಚಿದ ಬಾಲಕ
ರಚನೆ: ಡಾ| ಆರ್. ವಿ. ಭಂಡಾರಿ
ರಂಗಪಠ್ಯ, ನಿರ್ದೇಶನ : ಸಂತೋಷ ಗುಡ್ಡಿಯಂಗಡಿ
ನಮ್ಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು 2013-14ನೇ ಸಾಲಿನ ಪ್ರತಿಭಾ ಕಾರಂಜಿಗಾಗಿ ಪ್ರದರ್ಶಿಸಿದ ನಾಟಕ ಬೆಳಕು ಹಂಚಿದ ಬಾಲಕ. ಮಕ್ಕಳ ಮನಸ್ಸನ್ನು ವೈಚಾರಿಕವಾಗಿ ಅರಳಿಸುವ ನಾಟಕಗಳನ್ನು ಬರೆದ ಹಿರಿಯ ವ್ಯಕ್ತಿತ್ವ ಡಾ| ಆರ್. ವಿ. ಭಂಡಾರಿ. ಆ ಮೂಲಕ ಮನರಂಜನೆ ಎಂಬುದು ಬರಿಯ ಮಕ್ಕಳಾಟವಲ್ಲ ಅದು ಕೂಡ ಒಂದು ಕಲಿಕೆ ಎಂಬುವುದನ್ನ ತಮ್ಮ ಮಕ್ಕಳ ಸಾಹಿತ್ಯದ ನಾಡಿಗೆ ನೀಡಿದವರು. ಅವರು ಬರೆದ ಡಾ| ಭೀಮ್ ರಾವ್ ಅಂಬೇಡ್ಕರರ ಬಾಲ್ಯದ ಘಟನೆಯೊಂದನ್ನು ಆಧರಿಸಿದ ನಾಟಕ "ಬೆಳಕು ಹಂಚಿದ ಬಾಲಕ". ಈ ನಾಟಕದ ಕಲಿಕೆಯೊಂದಿಗೆ ಮಕ್ಕಳು ಅಂಬೇಡ್ಕರರ ಬಾಲ್ಯ ಮತ್ತು ಶಿಕ್ಷಣದ ಮಹತ್ವದ ಕುರಿತು ತಿಳಿಯುತ್ತಾರೆ ಎಂಬ ಆಶಯದೊಂದಿಗೆ "ಬೆಳಕು ಹಂಚಿದ ಬಾಲಕ" ರಂಗ ಪ್ರಯೋಗ ತಯಾರಾಗಿ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದ್ವಿತೀಯ ಬಹುಮಾನ ಗಳಿಸಿದೆ.
ನಾಟಕ ಅಂದಮೇಲೆ ಸಂಗೀತ ಬೇಕಲ್ಲ!!
ಭೀಮನ ಕಿವಿಹಿಂಡಿದ ಕ್ಷಣ
ಭೀಮನಿಗೆ ನೀರು ಕೊಡದ ಸಹಪಾಠಿಗಳು
ಭೀಮನಿಗೆ ಅಂಬೇಡ್ಕರ್ ಎಂದು ನಾಮಕರಣ ಮಾಡಿದ ಮೇಸ್ಟ್ರ ತರಗತಿ
ತರಗತಿಯಲ್ಲಿ ಮೇಸ್ಟ್ರು ಕೇಳಿದ ಪ್ರಶ್ನೆಗೊಂದುತ್ತರ
ಭೀಮನ ರಾತ್ರಿ ಶಾಲೆ
ನಾಟಕದೊಳಗೊಂದು ನಾಟಕ; ಭೀಮನ ಬುದ್ಧನ ಪಾತ್ರ
ಬುದ್ಧ ಮತ್ತು ಆನಂದ
ಬುದ್ಧ ಆಗುಂತಕನ ಆಹ್ವಾನ ಒಪ್ಪಿಕೊಳ್ಳುವುದು
ಭೀಮನ ಗೆಳೆಯರು ಭೀಮ ಹಚ್ಚಿದ ದೀಪದ ಕೆಳಗೆ ಬರುವ ಸಿದ್ಧತೆ
ದೀಪವೆಂದರೆ ಬರಿ ದೀಪವಲ್ಲ ಭೇದ-ಭಾವದ ಗೆರೆಯ ದಾಟಿಸುವ ದೀಪ
ಸಮಾನತೆಯ ಹಾದಿಗೆ ನಿದ್ದೆಯಿಂದ ಏಳಿಸಿ ಕರೆದ ಪರಿ
ಬೆಳಕು ಹಂಚಿದ ಬಾಲಕ