ರಾಜ್ಯಮಟ್ಟಕ್ಕೆ ಹೆಗ್ಗಡಹಳ್ಳಿ ಮಕ್ಕಳು
ದಿನಾಂಕ 30-09-2015ರಂದು ಮಯ್ಸೂರಿನ ಸಿಟಿಇ ಆವರಣದಲ್ಲಿ ನಡೆದ ಮಯ್ಸೂರು ವಿಭಾಗಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಹೆಗ್ಗಡಹಳ್ಳಿಯ ಮಕ್ಕಳು ಮಯ್ಸೂರು ಜಿಲ್ಲೆಯನ್ನು ಪ್ರತಿನಿಧಿಸಿ ಅಭಿನಯಿಸಿದ "ಭೂಮಿಗೆ ಜ್ವರ ಬಂದಿದೆ" ನಾಟಕ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ನಾಟಕ ಸ್ಪರ್ಧೆಯ ಉದ್ಘಾಟನೆ ಮಯ್ಸೂರು ಮೇಯರ್ ಲಿಂಗಪ್ಪ ಹಾಗೂ ಸಿಟಿಇ ಪ್ರಾಂಶುಪಾಲರಾದ ಬಿ.ಕೆ.ಬಸವರಾಜು ಅವರಿಂದ.
ಸಿಓ2 ಪಾತ್ರಕ್ಕೆ ಉತ್ತಮ ನಟ ಬಹುಮಾನ ಪಡೆದ ನಮ್ಮ ಶಾಲೆಯ ವಿದ್ಯಾರ್ಥಿ ಲೋಕೇಶ ಎಚ್.ಎಂ.
ಉತ್ತಮ ನಟಿ ಬಹುಮಾನ ಪಡೆದ ಮಂಡ್ಯ ಜಿಲ್ಲೆಯ ಕಾವ್ಯ ಡಿ. ಆರ್.
ಪ್ರಥಮ ಬಹುಮಾನ ಮಯ್ಸೂರು ಜಿಲ್ಲೆ (ಸರ್ಕಾರಿ ಪ್ರೌಢ ಶಾಲೆ, ಹೆಗ್ಗಡಹಳ್ಳಿ)
ದ್ವಿತೀಯ ಬಹುಮಾನ ಕೊಡಗು ಜಿಲ್ಲೆಯ ತಂಡ
ತೃತೀಯ ಬಹುಮಾನ ಮಂಡ್ಯ ಜಿಲ್ಲೆಯ ತಂಡ
ಭೂಮಿಗೆ ಜ್ವರ ಬಂದಿದೆ ನಾಟಕದ ಕೆಲವು ದೃಶ್ಯಗಳು