Tuesday, 24 September 2019

CLIMATE STRIKE AT HEGGADAHALLI


ಗ್ರೇಟಾ ಥನ್ಬರ್ಗ್ ಕರೆನೀಡಿದ ಜಾಗತಿಕ ಹವಾಮಾನ ಬದಲಾವಣೆ ಕುರಿತ FRIDAYS FOR FUTURE ಪ್ರತಿಭಟನೆಗೆ ಜಗತ್ತಿನಾದ್ಯಂತ ಮಕ್ಕಳು, ದೊಡ್ಡವರು ದನಿಗೂಡಿಸುತ್ತಿರುವ ಹೊತ್ತಲ್ಲೇ ನಮ್ಮ ಶಾಲೆಯ ಮಕ್ಕಳ ತಮ್ಮ ದನಿಯನ್ನು ಸೇರಿಸಿದರು.



23-09-2019 ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯಲ್ಲಿ 2019ರ ಜಾಗತಿಕ ನಾಯಕರ ಮುಂದೆ ಗ್ರೇಟಾ “ನಿಮಗೆಷ್ಟು ಧೈರ್ಯ? ನೀವು ನಿಮ್ಮ ಖಾಲಿ ಮಾತುಗಳಿಂದ ನನ್ನ ಬಾಲ್ಯ, ಕನಸುಗಳನ್ನು ಚೂರಾಗಿಸಿದ್ದೀರಿ. ಜನ ಸಾಯುತ್ತಿದ್ದಾರೆ. ಇಡೀ ಪರಿಸರ ವ್ಯವಸ್ಥೆಯೇ ಹಾಳಾಗುತ್ತಿದೆ. ಹಸಿರುಮನೆ ಅನಿಲ ಹೊರಸೂಸುವಿಕೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಜಾಗತಿಕ ನಾಯಕರೆಲ್ಲರೂ ನನ್ನ ತಲೆಮಾರಿಗೆ ಮೋಸ ಮಾಡುತ್ತಿದ್ದಾರೆ” ಎಂದು ಗ್ರೇಟಾ ಗುಡುಗಿದ್ದಾಳೆ.
16 ವರ್ಷದ ಗ್ರೇಟಾ ಸ್ವೀಡನ್ ದೇಶದ ಶಾಲಾ ಬಾಲಕಿ. ಹವಾಮಾನ ಅಪಾಯಕಾರಿ ಬದಲಾವಣೆಗೆ ಕಳವಳಗೊಂಡು 2018ರಲ್ಲಿ ಅವಳೊಬ್ಬಳೇ ಆರಂಭಿಸಿದ SCHOOL STRIKE FOR CLIMATE / FRIDAYS FOR FUTURE ಚಳವಳಿ ಇಂದು ಇಡೀ ಜಗತ್ತನೇ ಆವರಿಸಿಕೊಂಡಿದೆ. ಸೆಪ್ಟಂಬರ್ 20-27ರವರೆಗೆ ಕರೆ ನೀಡಿದ್ದ ಗ್ಲೋಬಲ್ ಕ್ಲೈಮೇಟ್ ಸ್ಟ್ರೈಕ್ ಗೆ 150ಕ್ಕೂ ಹೆಚ್ಚು ದೇಶಗಳ ಮಕ್ಕಳು ದೊಡ್ಡವರು ದನಿಗೂಡಿಸಿದ್ದಾರೆ.

GLOBAL CLIMATE STRIKE ಚಳವಳಿಗೆ ನಮ್ಮ ಶಾಲೆಯ ಮಕ್ಕಳ ಸಣ್ಣ ದನಿಯೊಂದು ಸೇರಿಕೊಂಡಿದೆ. ಗ್ರೇಟಾಳನ್ನ ಸ್ಪೂರ್ತಿಯಾಗಿಸಿಕೊಂಡು ನಾವಾಗಲೇ “ನಿಮ್ಮ ಕಸ ನಿಮಗೆ” ಎಂಬ ಅಭಿಯಾನವನ್ನು ಆರಂಭಿಸಿದ್ದೇವೆ. ನಮ್ಮ ನಾಳೆಗೆ ಸುಂದರ ಪರಿಸರವನ್ನು ಉಳಿಸಿಕೊಳ್ಳುವ ಯತ್ನವನ್ನು ಇಂದೇ ಆರಂಭಿಸಿದ್ದೇವೆ. ನಾಳೆಗಳು ನಮ್ಮದು ಎಂಬ ಧ್ಯೇಯದೊಂದಿಗೆ ಪರಿಸರ ಕುರಿತ ಚಳವಳಿಯ ಸಾಗರಕೆ ಹೆಗ್ಗಡಹಳ್ಳಿಯ ತೊರೆಯೂ ಸೇರುತ್ತಿದೆ.