ಬಣ್ಣದ ಮೇಳ 2015
ನಮ್ಮ ಶಾಲೆಯ ಆವರಣದಲ್ಲಿ ದಿನಾಂಕ 10-10-2015ರಿಂದ ಆರಂಭವಾದ ಬಣ್ಣದ ಮೇಳ 2015 ಐದು ದಿನಗಳ ಕಾಲ ನಡೆಯಿತು. ಮುರಳೀಧರ ಎಚ್. ವಿ., ಸೂರ್ಯಕಾಂತ ನಂದೂರ, ರಾಮಗಿರಿ ಪೊಲೀಸ ಪಾಟೀಲ, ಮನು ಮಯ್ಸೂರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಡೇ ದಿನ ನಂಜನಗೂಡಿನ ಅಗ್ನಿಶಾಮಕ ಠಾಣೆಯ ಬಿ.ಜಿ. ಉತ್ತಪ್ಪ, ಯೋಗೀಶ, ಪರಶಿವಮೂರ್ತಿ, ಮರಿಯಪ್ಪ ಅವರು ಪ್ರಾತ್ಯಕ್ಷಿಕೆ ನೀಡಿದರು. ಮೇಳದಲ್ಲಿ ಹಾಡು, ಚಿತ್ರ, ಗೊಂಬೆ ತಯಾರಿ, ಒರಿಗಾಮಿ, ಗ್ರೀಟಿಂಗ್ಸ್, ಪೇಪರ್ ಫೋಲ್ಡ್ ಮಾಡಿ ಪ್ರಾಣಿ ಪಕ್ಷಿಗಳನ್ನು ಮಾಡುವುದು, ಗಣಿತದ ಆಕೃತಿಗಳಿಂದ ಚಿತ್ರ ಮಾಡುವುದು, ವನ್ಯಜೀವಿಗಳ ಕುರಿತು ಸಿನಿಮಾ ವೀಕ್ಷಣೆ ನಡೆಯಿತು. ಮಕ್ಕಳಿಗೆ ಸಂಭ್ರಮದ ಹೊನಲನ್ನೇ ಹರಿಸಿದ ಈ ಮೇಳದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೇಳವು ಶಾಲೆಯ ರಂಗಶಿಕ್ಷಕ ಸಂತೋಷ ಗುಡ್ಡಿಯಂಗಡಿ ನೇತೃತ್ವದಲ್ಲಿ ನಡೆಯಿತು
ವಿಜಯವಾಣಿಯಲ್ಲಿ ಬಣ್ಣದ ಮೇಳದ ಸುದ್ಧಿ
ಮೇಳದಲ್ಲಿ ನಾವುಗಳು ಮತ್ತು ನಮ್ಮ ಚಿತ್ರಗಳು
ಮುರಳೀಧರ ಎಚ್. ವಿ
ಸೂರ್ಯಕಾಂತ ನಂದೂರ
ರಾಮಗಿರಿ ಪೊಲೀಸ ಪಾಟೀಲ
ಮನು ಮಯ್ಸೂರು
ಮೇಳದಲ್ಲಿ ಹೀಗೊಂದು ಗ್ರೂಪ್ ಫೋಟೋ