Thursday, 23 July 2015

ಅಳ್ಳೀಮರಕ್ಕೆ ವರುಷವೆರಡು ಸಮಾರಂಭ

ದಿನಾಂಕ 23-07-2015 ಗುರುವಾರ

ನಮ್ಮ ಶಾಲೆಯ ಮಕ್ಕಳ ಪತ್ರಿಕೆ "ಅಳ್ಳೀಮರ"ಕ್ಕೆ ಎರಡು ವರುಷಗಳು ತುಂಬಿದ ನೆನಪಿಗೆ ಒಂದು ಪುಟ್ಟ ಸಮಾರಂಭ ನಡೆಯಿತು. ಅತಿಥಿಯಾಗಿ ಸಾಹಿತಿ ಯಶವಂತ ಎಸ್. ಹರಗಿಯವರು ಆಗಮಿಸಿದ್ದರು. ನಮ್ಮ ಮುಖ್ಯಶಿಕ್ಷಕರಾದ ಎ. ಎಂ. ಲಿಂಗರಾಜು ಅವರು ಅಧ್ಯಕ್ಷತೆ ವಹಿಸಿದ್ದರು. ನಮ್ಮ ಶಾಲೆಯ ಶಿಕ್ಷಕರಾದ ಅಂಬುಜ, ಸಿ. ಉಮೇಶ್ವರ, ಎಂ. ಮಹದೇವಪ್ಪ, ಟಿ. ಆರ್. ಮಂಜುನಾಥ, ಆರ್. ಪರಶಿವಮೂರ್ತಿ, ಶಂಷಾದ್ ಬೇಗಂ, ಫಾಮೀದಾ ಬೇಗಂ ಮತ್ತು ಎಸ್. ಶೋಭಾ ಅವರು ಹಾಜರಿದ್ದರು. ಹತ್ತನೇ ತರಗತಿಯ ದೀಪಿಕಾ ಎಚ್. ಪಿ. ಕಾರ್ಯಕ್ರಮವನ್ನು ನಿರೂಪಿದಳು. ಎಂಟನೇ ತರಗತಿಯ ಮಕ್ಕಳಾದ ಸಹನ, ಅನುಷ, ಅನಿತ, ಸೌಂದರ್ಯ, ಸಂಧ್ಯಾರಾಣಿ, ದೇವಿಕ, ಮೇಘ ಪ್ರಾರ್ಥನೆ ಮಾಡಿದರು. ಲೋಕೇಶ ಎಚ್.ಎಂ. ಸ್ವಾಗತಿಸಿದರೆ ಶೀಲಾ ಎಂ. ಎಸ್. ವಂದಿಸಿದಳು.
ಹೊಸ ಅಳ್ಳೀಮರ ಹಾಗೂ ಸಮಾರಂಭದ ಕೆಲವು ಚಿತ್ರಗಳು.











No comments:

Post a Comment