Tuesday, 8 November 2022

ಫಾಮಿದಾ ಬೇಗಮ್ ಅವರಿಗೆ ಬೀಳ್ಕೊಡುಗೆ ಸಮಾರಂಭ

 


ನಮ್ಮ ಶಾಲೆಯಲ್ಲಿ ಕಳೆದ ಹದಿಮೂರು ವರ್ಷಗಳಿಂದ ಹಿಂದಿ ಭಾಷಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ದಿನಾಂಕ 31-10-2022 ರಂದು ವಯೋ ನಿವೃತ್ತಿ ಹೊಂದಿದ ಮಕ್ಕಳ ಮೆಚ್ಚಿನ ಫಾಮಿದಾ ಬೇಗಮ್ ಅವರಿಗೆ ಶಾಲಾ ವತಿಯಿಂದ ಅದ್ಧೂರಿ ಬೀಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

            ಈ ಸಂದರ್ಭದಲ್ಲಿ ನಮ್ಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದ ಶ್ರೀ ಉಮೇಶ್ವರ ಮತ್ತು ಶ್ರೀ ಟಿ.ಆರ್. ಮಂಜುನಾಥ್ ಅವರು ಹಾಗೂ ವರ್ಗಾವಣೆ ಹೊಂದಿದ್ದ ಶ್ರೀ ಆರ್. ಪರಶಿವಮೂರ್ತಿ ಅವರು ಆಗಮಿಸಿ ಫಾಮಿದಾ ಬೇಗಮ್ ಅವರಿಗೆ ಗೌರವ ಸಮರ್ಪಿಸಿದರು.

            ನಮ್ಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ನಿವೃತ್ತರಾಗಿರುವ ಶಿಕ್ಷಕರಾಗಿರುವ ಶ್ರೀ. ನಾಗರಾಜು ಅವರು ಆಗಮಿಸಿ ನಿವೃತ್ತ ಶಿಕ್ಷಕಿಗೆ ಗೌರವ ಸಮರ್ಪಿಸಿದರು.

 ನಂಜನಗೂಡು ತಾಲೂಕು ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಬಿ.ಎಂ. ಬಸವಣ್ಣ ಮತ್ತು ಕಾರಯ್ಯ ಹಾಗೂ ಶ್ರೀಪತಿಯವರು ಆಗಮಿಸಿ ಫಾಮಿದಾ ಬೇಗಮ್ ಅವರಿಗೆ ತಾಲೂಕು ಸಂಘದ ವತಿಯಿಂದ ಗೌರವ ಸಮರ್ಪಿಸಿದರು.

10ನೇ ತರಗತಿ ವಿದ್ಯಾರ್ಥಿನಿಯರು ಫಾಮಿದಾ ಬೇಗಮ್ ಅವರು ಶಾಲೆಯಲ್ಲಿ ಕರ್ತವ್ಯದಲ್ಲಿ ತೊಡಗಿದ್ದಾಗಿನ ವಿವಿಧ ಛಾಯಾಚಿತ್ರಗಳನ್ನೊಳಗೊಂಡ ನೆನಪಿನ ಬುತ್ತಿಯನ್ನು ತಮ್ಮ ಪ್ರೀತಿಯ ಶಿಕ್ಷಕಿಗೆ ನೀಡಿ ಗೌರವಿಸಿದರು.

ಶಾಲಾ ಶಿಕ್ಷಕ ವೃಂದದಿಂದ ತಮ್ಮ ಸಹೋದ್ಯೋಗಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.















ಕನ್ನಡ ರಾಜ್ಯೋತ್ಸವ, ಬೀಳ್ಕೊಡುಗೆ ಸಮಾರಂಭ #ಕನ್ನಡ #ರಾಜ್ಯೋತ್ಸವ

ನಮ್ ಸ್ಕೂಲ್ ಟಿವಿ 12. ದೀಪಾವಳಿ ಕವಿತೆ

ಪ್ಲಾಸ್ಟಿಕ್ ಚರಿತ್ರೆ Plastic History ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಮಕ್ಕಳ ಪ್ರ...

ಪೋಷಣ ಅಭಿಯಾನ, ಪ್ರತಿಭಾ ಕಾರಂಜಿ. ರಂಗಗೀತೆ. ನಮ್ ಸ್ಕೂಲ್ ಟಿವಿಯ 11ನೇ ಕಂತು

ಬುಗುರಿ ಆಟ ಗ್ರಾಮೀಣ ಕ್ರೀಡೆ. #buguri government high school heggadahalli

ವಿಜ್ಞಾನ ನಾಟಕ, ಶಕ್ತಿಧಾಮ ತ್ರಿಸದಸ್ಯರ ಭೇಟಿ. ನಮ್ ಸ್ಕೂಲ್ ಟಿವಿಯ 10ನೇ ಕಂತು

ಶಿಕ್ಷಕರ ದಿನಾಚರಣೆ Teacher's day ಶಿಕ್ಷಕರಿಗೂ ಶಿಕ್ಷಕರಿರುತ್ತಾರೆ. ನಮ್ ಸ್ಕೂಲ್ ಟಿವಿ

ಘಮ ಘಮ ಸೊಪ್ಪು, ಪೆರಿಸ್ಕೋಪ್, ಶಿಕ್ಷಕರ ಕ್ರೀಡಾಕೂಟ

ಸ್ವಾತಂತ್ರ್ಯದ ಅಮೃತ ಮಹೋತ್ಸವ 75 independence day. #ಕೈತೋಟ ಸರ್ಕಾರಿ ಪ್ರೌಢಶಾಲೆ ...

ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ : ಸರ್ಕಾರಿ ಪ್ರೌಢಶಾಲೆ ಹೆಗ್ಗಡಹಳ್ಳಿ independ...

ಹುಲ್ಲಹಳ್ಳಿ ವಲಯ ಮಟ್ಟದ ಕ್ರೀಡಾಕೂಟ HIGH SCHOOL SPORTS ಕ್ರೀಡಾ ವಿಶೇಷ episode -6

ಕಾಮನ್ ವೆಲ್ತ್ ಗೇಮ್ಸ್-2022, ದಾನಿಗಳಿಗೆ ಧನ್ಯವಾದ, ಬಾದಾಮಿ ಗಿಡ ಪರಿಚಯ, ಮಳೆ. epis...

ಹುಲಿ ದಿನ TIGER DAY , ಡಾಕ್ಟರ್ ಜೊತೆ ಸಂವಾದ, ಕಣ್ಣಿನ ತಪಾಸಣೆ ಶಿಬಿರ. episode -4

ಹೊಸ ರಾಷ್ಟ್ರಪತಿ: ದ್ರೌಪದಿ ಮುರ್ಮು; ಪೈ ಅಂದಾಜು ದಿನ ; ಸುದ್ಧಿ, #ಗಣಿತ #ಕೃಷಿ. ಕಂತ...

ವಿಜ್ಞಾನ ವಿಶೇಷ, ಆರಂಬಗಾರರು. ಹೆಗ್ಗಡಹಳ್ಳಿ ಶಾಲಾ ಮಕ್ಕಳ ಟಿವಿ. ಜೇಮ್ಸ್ ವೆಬ್ ಟೆಲಿಸ...

ನಮ್ ಸ್ಕೂಲ್ ಟಿವಿ. namschool tv