Tuesday, 8 November 2022

ಫಾಮಿದಾ ಬೇಗಮ್ ಅವರಿಗೆ ಬೀಳ್ಕೊಡುಗೆ ಸಮಾರಂಭ

 


ನಮ್ಮ ಶಾಲೆಯಲ್ಲಿ ಕಳೆದ ಹದಿಮೂರು ವರ್ಷಗಳಿಂದ ಹಿಂದಿ ಭಾಷಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ದಿನಾಂಕ 31-10-2022 ರಂದು ವಯೋ ನಿವೃತ್ತಿ ಹೊಂದಿದ ಮಕ್ಕಳ ಮೆಚ್ಚಿನ ಫಾಮಿದಾ ಬೇಗಮ್ ಅವರಿಗೆ ಶಾಲಾ ವತಿಯಿಂದ ಅದ್ಧೂರಿ ಬೀಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

            ಈ ಸಂದರ್ಭದಲ್ಲಿ ನಮ್ಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದ ಶ್ರೀ ಉಮೇಶ್ವರ ಮತ್ತು ಶ್ರೀ ಟಿ.ಆರ್. ಮಂಜುನಾಥ್ ಅವರು ಹಾಗೂ ವರ್ಗಾವಣೆ ಹೊಂದಿದ್ದ ಶ್ರೀ ಆರ್. ಪರಶಿವಮೂರ್ತಿ ಅವರು ಆಗಮಿಸಿ ಫಾಮಿದಾ ಬೇಗಮ್ ಅವರಿಗೆ ಗೌರವ ಸಮರ್ಪಿಸಿದರು.

            ನಮ್ಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ನಿವೃತ್ತರಾಗಿರುವ ಶಿಕ್ಷಕರಾಗಿರುವ ಶ್ರೀ. ನಾಗರಾಜು ಅವರು ಆಗಮಿಸಿ ನಿವೃತ್ತ ಶಿಕ್ಷಕಿಗೆ ಗೌರವ ಸಮರ್ಪಿಸಿದರು.

 ನಂಜನಗೂಡು ತಾಲೂಕು ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಬಿ.ಎಂ. ಬಸವಣ್ಣ ಮತ್ತು ಕಾರಯ್ಯ ಹಾಗೂ ಶ್ರೀಪತಿಯವರು ಆಗಮಿಸಿ ಫಾಮಿದಾ ಬೇಗಮ್ ಅವರಿಗೆ ತಾಲೂಕು ಸಂಘದ ವತಿಯಿಂದ ಗೌರವ ಸಮರ್ಪಿಸಿದರು.

10ನೇ ತರಗತಿ ವಿದ್ಯಾರ್ಥಿನಿಯರು ಫಾಮಿದಾ ಬೇಗಮ್ ಅವರು ಶಾಲೆಯಲ್ಲಿ ಕರ್ತವ್ಯದಲ್ಲಿ ತೊಡಗಿದ್ದಾಗಿನ ವಿವಿಧ ಛಾಯಾಚಿತ್ರಗಳನ್ನೊಳಗೊಂಡ ನೆನಪಿನ ಬುತ್ತಿಯನ್ನು ತಮ್ಮ ಪ್ರೀತಿಯ ಶಿಕ್ಷಕಿಗೆ ನೀಡಿ ಗೌರವಿಸಿದರು.

ಶಾಲಾ ಶಿಕ್ಷಕ ವೃಂದದಿಂದ ತಮ್ಮ ಸಹೋದ್ಯೋಗಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.















No comments:

Post a Comment