Sunday, 16 March 2014



ಹೆಗ್ಗಡಹಳ್ಳಿಯಲ್ಲಿ ಹೊಸ ಹಸಿರು

ನಮ್ಮ ಶಾಲಾ ಆವರಣದಲ್ಲಿರುವ ಹೆಮ್ಮರಗಳಾದಿಯಾಗಿ ಗಿಡಮರಗಳೆಲ್ಲ ಹೊಸ ಚಿಗುರ ಹೊದ್ದು ನಳನಳಿಸುತ್ತಿರುವ ಒಂದು ಸೊಗಸಿನ ಯಾನ















Saturday, 15 March 2014


2013-14ನೇ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು, ಅದ್ಯಾಪಕವೃಂದದೊಂದಿಗೆ
ಅಳ್ಳೀಮರದ ಬುಡದಲ್ಲಿ


Tuesday, 25 February 2014



ಮಲೆನಾಡ ಇಳೆ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಕೋಣಂದೂರು
ಸರ್ಕಾರಿ ಪ್ರೌಢ ಶಾಲಾ ಮಕ್ಕಳ ಪತ್ರಿಕೆ.

ಗೆಳೆಯ ಶ್ರೀಕಾಂತ ಕುಮಟಾ ಈ ಪತ್ರಿಕೆಯನ್ನು ರೂಪಿಸುತ್ತಿದ್ದಾನೆ.
ಮಲೆನಾಡ ಇಳೆ ಪತ್ರಿಕೆಯೆ ಹೇಳಿಕೊಂಡ ಹಾಗೆ ಅದರ ಸ್ಫೂರ್ತಿ
ಹೆಗ್ಗಡಹಳ್ಳಿಯ ಅಳ್ಳೀಮರ





Saturday, 25 January 2014

Sunday, 12 January 2014



ಬೆಳಕು ಹಂಚಿದ ಬಾಲಕ

ರಚನೆ: ಡಾ| ಆರ್. ವಿ. ಭಂಡಾರಿ
ರಂಗಪಠ್ಯ, ನಿರ್ದೇಶನ : ಸಂತೋಷ ಗುಡ್ಡಿಯಂಗಡಿ

ನಮ್ಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು 2013-14ನೇ ಸಾಲಿನ ಪ್ರತಿಭಾ ಕಾರಂಜಿಗಾಗಿ ಪ್ರದರ್ಶಿಸಿದ ನಾಟಕ ಬೆಳಕು ಹಂಚಿದ ಬಾಲಕ. ಮಕ್ಕಳ ಮನಸ್ಸನ್ನು ವೈಚಾರಿಕವಾಗಿ ಅರಳಿಸುವ ನಾಟಕಗಳನ್ನು ಬರೆದ ಹಿರಿಯ ವ್ಯಕ್ತಿತ್ವ ಡಾ| ಆರ್. ವಿ. ಭಂಡಾರಿ. ಆ ಮೂಲಕ ಮನರಂಜನೆ ಎಂಬುದು ಬರಿಯ ಮಕ್ಕಳಾಟವಲ್ಲ ಅದು ಕೂಡ ಒಂದು ಕಲಿಕೆ ಎಂಬುವುದನ್ನ ತಮ್ಮ ಮಕ್ಕಳ ಸಾಹಿತ್ಯದ ನಾಡಿಗೆ ನೀಡಿದವರು. ಅವರು ಬರೆದ ಡಾ| ಭೀಮ್ ರಾವ್ ಅಂಬೇಡ್ಕರರ ಬಾಲ್ಯದ ಘಟನೆಯೊಂದನ್ನು ಆಧರಿಸಿದ ನಾಟಕ "ಬೆಳಕು ಹಂಚಿದ ಬಾಲಕ". ಈ ನಾಟಕದ ಕಲಿಕೆಯೊಂದಿಗೆ ಮಕ್ಕಳು ಅಂಬೇಡ್ಕರರ ಬಾಲ್ಯ ಮತ್ತು ಶಿಕ್ಷಣದ ಮಹತ್ವದ ಕುರಿತು ತಿಳಿಯುತ್ತಾರೆ ಎಂಬ ಆಶಯದೊಂದಿಗೆ "ಬೆಳಕು ಹಂಚಿದ ಬಾಲಕ" ರಂಗ ಪ್ರಯೋಗ ತಯಾರಾಗಿ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದ್ವಿತೀಯ ಬಹುಮಾನ ಗಳಿಸಿದೆ. 


ನಾಟಕ ಅಂದಮೇಲೆ ಸಂಗೀತ ಬೇಕಲ್ಲ!!


ಭೀಮನ ಕಿವಿಹಿಂಡಿದ ಕ್ಷಣ


ಭೀಮನಿಗೆ ನೀರು ಕೊಡದ ಸಹಪಾಠಿಗಳು


ಭೀಮನಿಗೆ ಅಂಬೇಡ್ಕರ್ ಎಂದು ನಾಮಕರಣ ಮಾಡಿದ ಮೇಸ್ಟ್ರ ತರಗತಿ


ತರಗತಿಯಲ್ಲಿ ಮೇಸ್ಟ್ರು ಕೇಳಿದ ಪ್ರಶ್ನೆಗೊಂದುತ್ತರ


ಭೀಮನ ರಾತ್ರಿ ಶಾಲೆ


ನಾಟಕದೊಳಗೊಂದು ನಾಟಕ; ಭೀಮನ ಬುದ್ಧನ ಪಾತ್ರ


ಬುದ್ಧ ಮತ್ತು ಆನಂದ


ಬುದ್ಧ ಆಗುಂತಕನ ಆಹ್ವಾನ ಒಪ್ಪಿಕೊಳ್ಳುವುದು


ಭೀಮನ ಗೆಳೆಯರು ಭೀಮ ಹಚ್ಚಿದ ದೀಪದ ಕೆಳಗೆ ಬರುವ ಸಿದ್ಧತೆ


ದೀಪವೆಂದರೆ ಬರಿ ದೀಪವಲ್ಲ ಭೇದ-ಭಾವದ ಗೆರೆಯ ದಾಟಿಸುವ ದೀಪ


ಸಮಾನತೆಯ ಹಾದಿಗೆ ನಿದ್ದೆಯಿಂದ ಏಳಿಸಿ ಕರೆದ ಪರಿ



ಬೆಳಕು ಹಂಚಿದ ಬಾಲಕ

Sunday, 5 January 2014

ಪ್ರವಾಸದ ಮಜಾ


ನಮ್ಮ ಶಾಲೆಯಿಂದ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಉತ್ತರಕನ್ನಡಕ್ಕೆ ಪ್ರವಾಸಕ್ಕೆ ಹೋಗಿದ್ದಾಗ ಸಿಕ್ಕ ಕೆಲವು ದೃಶ್ಯಗಳು






 ಕುಂದಾಪುರದ ಮರವಂತೆ (ಮಾರಸ್ವಾಮಿ) ಕಡಲ ತೀರದಲ್ಲಿ ನಮ್ಮ ಹುಡುಗರು


ಮರವಂತೆಯಲ್ಲಿ ಹುಡುಗಿಯರಿಗೆ ಅಲೆಯ ಸಿಂಚನ


 ದುಬಾರೆ ಆನೆ ಶಿಬಿರದಲ್ಲಿ ಚಹಾ ತಯಾರಿ; ಆನೆಗಳಿಗಲ್ಲ ನಮ್ಮ ಮಕ್ಕಳಿಗೆ


 ದುಬಾರೆಯಲ್ಲಿ ಕಂಡ ನೀಲಿ ಬಾನು


ಕಡಲ ಮುಂದೆ ಮಾನವರು ಎಷ್ಟು ಚಿಕ್ಕವರು ನೋಡ್ರಿ!


ಕಪ್ಪು ಕನ್ನಡಕ ಹಾಕಿ ಕಂಡರೂ ಕಡಲು ಯಾವಾಗಲೂ ನೀಲಿನೇ!


ಕಡಲ ಮುಂದೆ ಗ್ರೂಪ್ ಪೋಟೋ, ಕಡಲೇ ಕಾಣದಷ್ಟು ಜನರದ್ದು! 


ಕಡಲನ್ನು ಹುಡುಕಬೇಕು ಹುಡುಗರ ನಡುವೆ



ಸಮುದ್ರರಾಜನ ಮೊಮ್ಮಕ್ಕಳು ಮುರುಡೇಶ್ವರದಲ್ಲಿ

Sunday, 22 December 2013

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ 21-12-2013
ನಮ್ಮ ಮಕ್ಕಳ ಒಂದಷ್ಟು ಚಿತ್ರಗಳು