Tuesday, 28 January 2020
Thursday, 17 October 2019
ವಿಜ್ಞಾನ ನಾಟಕದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ವಿಜ್ಞಾನ ನಾಟಕದಲ್ಲಿ
ರಾಜ್ಯಮಟ್ಟಕ್ಕೆ ಆಯ್ಕೆ
ಚಾಮರಾಜನಗರದ
ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜರುಗಿದ ಮೈಸೂರು ವಿಭಾಗಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಮೈಸೂರು
ಜಿಲ್ಲೆಯನ್ನು ಪ್ರತಿನಿಧಿಸಿದ ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು
ಪ್ರಸ್ತುತಪಡಿಸಿದ “ಕಾರ್ಬನ್ ಲೋಕ” ನಾಟಕ ಪ್ರಥಮಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆವರ್ತಕೋಷ್ಠಕ
ವಿಷಯವನ್ನಿಟ್ಟುಕೊಂಡು ಕಾರ್ಬನ್ ಧಾತುವನ್ನು ಪ್ರಧಾನವಾಗಿಟ್ಟುಕೊಂಡ ಈ ನಾಟಕವು ಕಾರ್ಬನ್ ಮತ್ತು
ಅದರ ಸಂಯುಕ್ತಗಳು ನಮ್ಮ ಬದುಕಿಗೆ ಹೇಗೆ ಉಪಕಾರಿಯಾಗಿದೆ ಮತ್ತು ಅಪಾಯಕಾರಿಯಾಗಿದೆ ಎಂದು ತಿಳಿಸುವ
ಪ್ರಯತ್ನವಾಗಿದೆ ಈ ಪ್ರಯೋಗ.
ರಷ್ಯಾದ ರಸಾಯನಶಾಸ್ತ್ರ
ವಿಜ್ಞಾನಿ ಡಿಮಿಟ್ರಿ ಮೆಂಡಲೀವ್ ರಚಿಸಿದ ಆಧುನಿಕ ಆವರ್ತಕೋಷ್ಠಕಕ್ಕೆ 150ವರ್ಷ ತುಂಬಿದ ಸಂದರ್ಭದಲ್ಲಿ
2019ನ್ನು ಅಂತರರಾಷ್ಟ್ರೀಯ ಆವರ್ತಕೋಷ್ಠಕ ವರ್ಷವಾಗಿ ಆಚರಿಸಲಾಗುತ್ತಿದೆ. ಹೀಗಾಗಿ ವಿಜ್ಞಾನ ನಾಟಕ
ಸ್ಪರ್ಧೆಗೂ ಆವರ್ತಕೋಷ್ಠಕವನ್ನೂ ಒಂದು ವಿಷಯವಾಗಿ ನೀಡಲಾಗಿದೆ.
ದ್ವಿತೀಯ ಸ್ಥಾನವನ್ನು
ಚಾಮರಾಜನಗರ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆ ಗುಂಬಳ್ಳಿಯ ಮಕ್ಕಳು ಪಡೆದರೆ ಮೂರನೇ ಬಹುಮಾನವನ್ನು ಕೊಡಗು
ಜಿಲ್ಲೆಯ ಮಕ್ಕಳು ಪಡೆದರು.
ನಮ್ಮ ಶಾಲೆಯು
ನಾಲ್ಕು ವರ್ಷಗಳ ಹಿಂದೆ ರಾಜ್ಯಮಟ್ಟದಲ್ಲಿ ಸಮಾಧಾನಕರ ಬಹುಮಾನ ಪಡೆದಿದ್ದು ಇದೀಗ ಮತ್ತೆ ರಾಜ್ಯಮಟ್ಟಕ್ಕೆ
ಆಯ್ಕೆಯಾಗಿದೆ. ನಾಟಕದಲ್ಲಿ ಕಾರ್ಬನ್ ಪಾತ್ರದಲ್ಲಿ ಎಸ್. ಅನಿತ, ಕಲ್ಲಿದ್ದಿಲು ಪಾತ್ರದಲ್ಲಿ ಡಿ.ಕೆ.
ಶಿವಪ್ರಸಾದ್, ಕಾಡಿಗೆ ಪಾತ್ರದಲ್ಲಿ ಎಮ್.ಪಿ.ನೇತ್ರಾವತಿ, ಅಜ್ಜಿಯ ಪಾತ್ರದಲ್ಲಿ ಆರ್. ಸಹನ, ವಿದ್ಯಾರ್ಥಿನಿಯ
ಪಾತ್ರದಲ್ಲಿ ರಕ್ಷಿತಾ, ಅಪ್ಪನ ಪಾತ್ರದಲ್ಲಿ ಆರ್. ಅಭಿಷೇಕ, ಸಂಗೀತದಲ್ಲಿ ಎಸ್. ಅಭಿಷೇಕ ಮತ್ತು ತಾಂತ್ರಿಕ
ನಿರ್ವಹಣೆಯಲ್ಲಿ ಪಿ. ಮನು ಭಾಗವಹಿಸಿದ್ದರು.
Monday, 30 September 2019
ಜಾನಪದ ನೃತ್ಯ
ರಾಜ್ಯಮಟ್ಟದಲ್ಲಿ ಹೆಗ್ಗಡಹಳ್ಳಿಯ ಮಕ್ಕಳ
ಪರಿಸರ ಸಂರಕ್ಷಣೆ ಕುರಿತು ಜಾನಪದ ನೃತ್ಯ
ದಿನಾಂಕ 20-09-2019ರಂದು ಬೆಂಗಳೂರಿನ ಅಶ್ವಿನಿ
ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳು ಮೈಸೂರು ಜಿಲ್ಲೆಯನ್ನು
ಪ್ರತಿನಿಧಿಸಿ ನೃತ್ಯ ಪ್ರದರ್ಶನವನ್ನು ನೀಡಿದರು. ಈ ಮೊದಲು ತಾಲೂಕು, ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ
ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು
‘ಪರಿಸರ ಸಂರಕ್ಷಣೆ’ ವಿಷಯದ ಮೇಲೆ ಅಮೆಜಾನ್
ಕಾಳ್ಗಿಚ್ಚನ್ನು ಆಧರಿಸಿ ಜಾನಪದ ನೃತ್ಯವನ್ನು ಪ್ರಸ್ತುತಪಡಿಸಿದರು. ಭೂಮಿಯ ಶ್ವಾಸಕೋಶ ಅಮೇಜಾನ್ ಕಾಡುಗಳಿಗೆ
ಬೆಂಕಿ ಹಾಕಿದ ಮಾನವ ಲಕ್ಷಾಂತರ ಎಕರೆ ಕಾಡು ನಾಶವಾಗಲು, ಹಲವಾರು ಜೀವಪ್ರಭೇದಗಳು ನಾಶವಾಗಲು ಕಾರಣನಾಗಿದ್ದಾನೆ.
ಅಮೇಜಾನ್ ಉಳಿಸಿ ಎಂದು ಬುಡಕಟ್ಟು ಜನರು ಬೇಡಿಕೊಳ್ಳುವ, ಅದನ್ನು ಕನ್ನಡ ನಾಡಿನ ಜನಪ್ರಿಯ ಜಾನಪದ ನೃತ್ಯ
ಕೋಲಾಟದ ಮೂಲಕ ಪ್ರಸ್ತುತಪಡಿಸಿದರು.
ನೃತ್ಯದಲ್ಲಿ 9ನೇ ತರಗತಿಯ ಎಸ್. ಅನಿತ, ಡಿ.ಜಿ.ಪೂರ್ಣಿಮ, ರಕ್ಷಿತ,
ಎಂ.ಪಿ. ನೇತ್ರಾವತಿ, ಡಿ. ಜಿ.ಸಂಜನಾ, ಡಿ.ಸಿ.ಐಶ್ವರ್ಯ ಭಾಗವಹಿಸಿದ್ದರು. ಇವರಿಗೆ ಹಿಮ್ಮೇಳದಲ್ಲಿ
ಹಾಡುಗಾರರಾಗಿ ಆರ್.ಸಹನಾ, ಎಸ್.ಪೂರ್ಣಿಮಾ ಮತ್ತುಡಿ.ಕೆ.ಶಿವಪ್ರಸಾದ್ ಸಹಕರಿಸಿದ್ದರು. ಬೆಂಗಳೂರಿನಲ್ಲಿ ನೃತ್ಯ ಪ್ರದರ್ಶನ ನೀಡಿದ
ಮಕ್ಕಳು ನಂತರ ನಮ್ಮಮೆಟ್ರೋದಲ್ಲಿ ಪ್ರಯಾಣಿಸಿ ಸಂತಸಗೊಂಡರು
![]() |
ನೃತ್ಯದಲ್ಲಿ ಭಾಗವಹಿಸಿದ ಮಕ್ಕಳು ಶಾಲಾ ಶಿಕ್ಷಕರೊಂದಿಗೆ
|
The Theme of
our folk dance is ‘Protection of Environment’
Kolaata
Kolaata
or play of sticks is a popular folk dance form of Karnataka. According to
historical evidences Kolaata dance originated
in the 7th century A.D. It is a unique dance form which involves song
and dance. Yadavas expressed their
happiness through Kolaata when Lord
Krishna was born in Gokula. Using
colourful sticks Gopika women played
with Lord Krishna. This is a proof of
mythological importance of Kolaata
and it also proves that it is an ancient art form.
Kolaata
is normally performed during festivities, festivals and on special occasions.
Those
who organize Kolaata are called as Kolu huyyuvvaru.
From
a minimum of eight to a maximum of 24 persons participate in this folk dance.
Importance
is given to strong sticks which generate good sound.
Kolaata
sticks are usually prepared from some special trees like Kaare, Aale, Baine and they were painted with
colours. Those who play Dammadi Thaala
stand in the middle of the Kolaata
performers. In some places Kolaata
players play the dance tying wooden legs to their legs which we normally call
as maragaalu.
Kolu songs play an
important role in Kolaata. These
consists of rhymes, stanza and refrain. Fun, tragedy and romance are the main
themes of Kolu songs.
Today, in this national
folk dance competition we are going to perform Kolaata a popular folk dance form of Karnataka. The theme we have selected
for this dance is ‘Protection of Environment’.
Amazon forests which
are called as lungs of the earth and which supply 20% of the oxygen caught fire
recently and continuously burnt for over three weeks. This forest fire engulfed
lakhs of acres of forest. The forest was destroyed because of the greed of
corporate powers and as a result tribal people lost their lives and huge
ecological destruction resulted. Experts say that the whole earth will have to
borne the brunt of this disaster.
We are trying to view
the consequences of this forest fire from the eyes of those tribal people and
for it we have used the Kolaata dance
of our state.
![]() |
ರಾಜ್ಯದ ವಿವಿಧ ಜಿಲ್ಲೆಯ ಮಕ್ಕಳೊಂದಿಗೆ ನಮ್ಮ
ಮಕ್ಕಳು
|
Tuesday, 24 September 2019
CLIMATE STRIKE AT HEGGADAHALLI
ಗ್ರೇಟಾ
ಥನ್ಬರ್ಗ್ ಕರೆನೀಡಿದ ಜಾಗತಿಕ ಹವಾಮಾನ ಬದಲಾವಣೆ ಕುರಿತ FRIDAYS FOR FUTURE ಪ್ರತಿಭಟನೆಗೆ ಜಗತ್ತಿನಾದ್ಯಂತ
ಮಕ್ಕಳು, ದೊಡ್ಡವರು ದನಿಗೂಡಿಸುತ್ತಿರುವ ಹೊತ್ತಲ್ಲೇ ನಮ್ಮ ಶಾಲೆಯ ಮಕ್ಕಳ ತಮ್ಮ ದನಿಯನ್ನು ಸೇರಿಸಿದರು.
23-09-2019
ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯಲ್ಲಿ 2019ರ ಜಾಗತಿಕ ನಾಯಕರ ಮುಂದೆ ಗ್ರೇಟಾ “ನಿಮಗೆಷ್ಟು ಧೈರ್ಯ?
ನೀವು ನಿಮ್ಮ ಖಾಲಿ ಮಾತುಗಳಿಂದ ನನ್ನ ಬಾಲ್ಯ, ಕನಸುಗಳನ್ನು ಚೂರಾಗಿಸಿದ್ದೀರಿ. ಜನ ಸಾಯುತ್ತಿದ್ದಾರೆ.
ಇಡೀ ಪರಿಸರ ವ್ಯವಸ್ಥೆಯೇ ಹಾಳಾಗುತ್ತಿದೆ. ಹಸಿರುಮನೆ ಅನಿಲ ಹೊರಸೂಸುವಿಕೆ ನಿಯಂತ್ರಿಸುವಲ್ಲಿ ವಿಫಲವಾಗಿರುವ
ಜಾಗತಿಕ ನಾಯಕರೆಲ್ಲರೂ ನನ್ನ ತಲೆಮಾರಿಗೆ ಮೋಸ ಮಾಡುತ್ತಿದ್ದಾರೆ” ಎಂದು ಗ್ರೇಟಾ ಗುಡುಗಿದ್ದಾಳೆ.
16
ವರ್ಷದ ಗ್ರೇಟಾ ಸ್ವೀಡನ್ ದೇಶದ ಶಾಲಾ ಬಾಲಕಿ. ಹವಾಮಾನ ಅಪಾಯಕಾರಿ ಬದಲಾವಣೆಗೆ ಕಳವಳಗೊಂಡು 2018ರಲ್ಲಿ
ಅವಳೊಬ್ಬಳೇ ಆರಂಭಿಸಿದ SCHOOL STRIKE FOR CLIMATE / FRIDAYS FOR FUTURE ಚಳವಳಿ ಇಂದು ಇಡೀ
ಜಗತ್ತನೇ ಆವರಿಸಿಕೊಂಡಿದೆ. ಸೆಪ್ಟಂಬರ್ 20-27ರವರೆಗೆ ಕರೆ ನೀಡಿದ್ದ ಗ್ಲೋಬಲ್ ಕ್ಲೈಮೇಟ್ ಸ್ಟ್ರೈಕ್
ಗೆ 150ಕ್ಕೂ ಹೆಚ್ಚು ದೇಶಗಳ ಮಕ್ಕಳು ದೊಡ್ಡವರು ದನಿಗೂಡಿಸಿದ್ದಾರೆ.
GLOBAL
CLIMATE STRIKE ಚಳವಳಿಗೆ ನಮ್ಮ ಶಾಲೆಯ ಮಕ್ಕಳ ಸಣ್ಣ ದನಿಯೊಂದು ಸೇರಿಕೊಂಡಿದೆ. ಗ್ರೇಟಾಳನ್ನ ಸ್ಪೂರ್ತಿಯಾಗಿಸಿಕೊಂಡು
ನಾವಾಗಲೇ “ನಿಮ್ಮ ಕಸ ನಿಮಗೆ” ಎಂಬ ಅಭಿಯಾನವನ್ನು ಆರಂಭಿಸಿದ್ದೇವೆ. ನಮ್ಮ ನಾಳೆಗೆ ಸುಂದರ ಪರಿಸರವನ್ನು
ಉಳಿಸಿಕೊಳ್ಳುವ ಯತ್ನವನ್ನು ಇಂದೇ ಆರಂಭಿಸಿದ್ದೇವೆ. ನಾಳೆಗಳು ನಮ್ಮದು ಎಂಬ ಧ್ಯೇಯದೊಂದಿಗೆ ಪರಿಸರ
ಕುರಿತ ಚಳವಳಿಯ ಸಾಗರಕೆ ಹೆಗ್ಗಡಹಳ್ಳಿಯ ತೊರೆಯೂ ಸೇರುತ್ತಿದೆ.
![]() |
Friday, 20 September 2019
ನಿಮ್ಮ ಕಸ ನಿಮಗೆ
ನಿಮ್ಮ ಕಸ ನಿಮಗೆ
2019ರ ಏಪ್ರಿಲ್ ತಿಂಗಳಲ್ಲಿ
ನಮ್ಮ ಶಾಲೆಯ ‘ಬಣ್ಣದ ಮೇಳ’ದಲ್ಲಿ ನಿಮ್ಮ ಕಸ ನಿಮಗೆ ಎಂಬ ಅಭಿಯಾನವನ್ನು ಆರಂಭಿಸಲಾಯಿತು.
ಅಭಿಯಾನದ ಉದ್ದೇಶ:
ಮಕ್ಕಳ ತಿಂಡಿಯಿಂದ ಆರಂಭಿಸಿ
ನಾವು ಬಳಸುವ ಪ್ರತಿಯೊಂದು ವಸ್ತುಗಳೂ ಪ್ಲಾಸ್ಟಿಕ್ ಕವರಿನಿಂದ ಸುತ್ತಿರುತ್ತವೆ. ಬಳಸಿದ ಪ್ರತಿಯೊಬ್ಬರು
ಆ ಕವರನ್ನು ಎಸೆದುಬಿಡುತ್ತಾರೆ. ನಮಗೆಲ್ಲ ಆ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡುವುದು ಮತ್ತು
ಸೂಕ್ತ ವಿಲೇವಾರಿ ತಿಳಿದಿಲ್ಲ. ಹೀಗಾಗಿ ಆ ಪ್ಲಾಸ್ಟಿಕ್ ತ್ಯಾಜ್ಯವು ನಮ್ಮ ಪರಿಸರಕ್ಕೆ ಮಾರಕವಾಗಿ
ಉಳಿಸುಬಿಡುತ್ತದೆ ಎಂಬುದು ನಮಗೆಲ್ಲ ತಿಳಿದ ವಿಚಾರ.
ನಮ್ಮ ಊರೂರು, ನದಿ, ಕಾಡು, ಸಮುದ್ರವನ್ನೆಲ್ಲ
ಆವರಿಸಿಕೊಳ್ಳುತ್ತಿರುವ ೀ ರಾಕ್ಷಸ ಕಸವನ್ನು ತಡೆಯಲು ನಾವೇನು ಮಾಡಬಹುದು? ಎಂದು ಯೋಚಿಸುತ್ತಿರುವಾಗಲೇ
ಮೂಡಿಸಿದ್ದು “ನಿಮ್ಮ ಕಸ ನಿಮಗೆ” ಎಂಬ ತಯಾರಿಸಿದವರಿಗೇ ಅವರ ಕಸವನ್ನು ವಾಪಾಸ್ಸು ಕಳಿಸುವ ಸಾತ್ವಿಕ
ಪ್ರತಿಭಟನಾ ದಾರಿ.
ನಾವು ನಮಗೆ ದೊರೆತ ಪ್ರತೀ ಕಂಪೆನಿಯ
ಕಸವನ್ನು ವಿಂಗಡಿಸಿ ಪ್ಯಾಕೇಟು ಮಾಡಿ ಆ ಕಂಪೆನಿಗೊಂದು ಪತ್ರ ಬರೆದು, ನಮ್ಮ ಶಾಲೆಯ ಮಕ್ಕಳೆಲ್ಲ ಸಹಿ
ಮಾಡಿ ಕಸದ ಜೊತೆ ರಿಜಿಸ್ಟರ್ ಅಂಚೆಯ ಮೂಲಕ ಪ್ರತೀ ತಿಂಗಳು ಕಳಿಸುವುದು ನಮ್ಮ ಅಭಿಯಾನದ ಯೋಜನೆ. ಅದರಂತೆ
2019 ಏಪ್ರಿಲ್ 9ರಂದು ಪ್ರಥಮ ಕಂತಿನ ಕಸದ ಪ್ಯಾಕೇಟುಗಳು
ದೇಶದ ಮತ್ತು ಪ್ರಪಂಚದ ಪ್ರಖ್ಯಾತ ಹತ್ತು ಕಂಪೆನಿಗಳಿಗೆ ಕಳಿಸಿದೆವು.
ಇಂಥದ್ದೊಂದು ಅಭಿಯಾನ ದೇಶದಲ್ಲೇ
ವಿನೂತನವಾದುದು ಎಂಬುದು ಪ್ರಸಿದ್ಧ ವಿಜ್ಞಾನ ಲೇಖಕರಾದ ನಾಗೇಶ ಹೆಗಡೆಯವರ ಅಭಿಪ್ರಾಯ. ನಿಮ್ಮ ಕಸ ನಿಮಗೆ
ಅಭಿಯಾನದ ಎರಡನೇ ಕಂತಿನ ಕಸ ತಲುಪುತ್ತಲೇ ಬಹುರಾಷ್ಟ್ರೀಯ ಕಂಪೆನಿ “ಕೋಲ್ಗೇಟ್” ತಮ್ಮ ಪ್ರತಿಕ್ರಿಯೆಯನ್ನು
ನಮಗೆ ಬರೆದಿದೆ. ‘2025ರ ಹೊತ್ತಿಗೆ ನಾವು ನಮ್ಮೆಲ್ಲ ಪ್ಲಾಸ್ಟಿಕ್ ಉತ್ಪಾದನೆಯನ್ನು ಶೇಕಡಾ ನೂರರಷ್ಟು
ಮರುಬಳಕೆ ಮಾಡುತ್ತೇವೆ’ ಎಂಬ ವಾಗ್ದಾನವನ್ನು ಹೆಗ್ಗಡಹಳ್ಳಿಯ ಮಕ್ಕಳಿಗೆ ನೀಡಿದೆ. ಈ ಪ್ರತಿಕ್ರಿಯೆ
ನಮ್ಮ ಕಸ ಕಳಿಸುವ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಿದೆ. ಇದೀಗ ನಾಲ್ಕು ಕಂತನ್ನು ಪೂರೈಸಿದ್ದೇವೆ.
ಇದುವರೆಗೆ 35ಕ್ಕೂ ಹೆಚ್ಚು ಕಂಪೆನಿಗಳಿಗೆ ಕಸ ಕಳಿಸಿದ್ದೇವೆ. ಮಕ್ಕಳ ತಿಂಡಿ ತಯಾರಿಸುವ ನೆಸ್ಲೆ,
ಪೆಪ್ಸಿಕೊ, ಪಾರ್ಲೆ ಮುಂತಾದ ಕಂಪೆನಿಗಳಿಗೆ ಪ್ರತೀ ತಿಂಗಳೂ ಕಸವನ್ನು ಕಳಿಸುತ್ತೆದ್ದೇವೆ.
ನಮ್ಮ ಅಭಿಯಾನ ಮತ್ತು ನಮ್ಮ ಸುಂದರ ನಾಳೆಗಳನ್ನು ಉಳಿಸಿಕೊಡಿ ಎಂದು ಪ್ರದಾನಮಂತ್ರಿ
ಮತ್ತು ರಾಷ್ಟ್ರಪತಿಗಳಿಗೂ ಪತ್ರ ಬರೆದಿದ್ದೇವೆ.
Monday, 3 June 2019
Wednesday, 12 December 2018
Subscribe to:
Posts (Atom)































