Sunday, 22 December 2013
Sunday, 15 December 2013
ಹುಲಿ ಮೈಸೂರು ನೋಡಬೇಕು ಅಂತ ಬರೋಲ್ಲ....
ಕೃಪೆ : ಪ್ರಜಾವಾಣಿ ಸಾಪ್ತಾಹಿಕ ಪುರವಣಿ 15-12-2013
ಡಾ. ನಾ. ಡಿಸೋಜ
ಮಡಿಕೇರಿಯಲ್ಲಿ ನಡೆಯಲಿರುವ ಎಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿರುವ ನಾ. ಡಿಸೋಜ ಅವರಿಗೆ ಮಕ್ಕಳನ್ನು ಕಂಡರೆ ಇನ್ನಿಲ್ಲದ ಪ್ರೀತಿ. ಸಮ್ಮೇಳನದ ಅಧ್ಯಕ್ಷರಾಗಿ ಡಿಸೋಜ ಅವರು ಆಯ್ಕೆಯಾಗಿದ್ದೇ ತಡ, ನಂಜನಗೂಡು ತಾಲ್ಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢಶಾಲೆ ಮಕ್ಕಳು ಫೋನ್ ಮಾಡಿದರು. ಅಭಿನಂದನೆ ಹೇಳುವುದರ ಜೊತೆಗೆ ಹಲವು ಪ್ರಶ್ನೆಗಳನ್ನೂ ಕೇಳಿದರು. ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಹಿರಿಯ ಸಾಹಿತಿ ಪ್ರೀತಿಯಿಂದ ಉತ್ತರಿಸಿದರು. ಈ ಸಂವಾದದಲ್ಲಿ ನಾಟಕದ ಮೇಷ್ಟ್ರು ಸಂತೋಷ್ ಗುಡ್ಡಿಯಂಗಡಿ ಮಕ್ಕಳ ಜೊತೆಗಿದ್ದರು. ದೂರವಾಣಿ ಮೂಲಕ ಡಿಸೋಜ ಅಂಕಲ್ ಜೊತೆಗೆ ಮಕ್ಕಳು ನಡೆಸಿದ ಸಂವಾದದ ಸಂಗ್ರಹ ರೂಪ ಇಲ್ಲಿದೆ.
*ಎಚ್.ಎಚ್. ಆಶಾ : ನಮಸ್ಕಾರ ಸರ್, ಮಕ್ಕಳಿಗಾಗಿ ಸತತವಾಗಿ ಕತೆಗಳನ್ನು ಬರೀತಾ ಇದ್ದೀರಿ. ಮಕ್ಕಳ ಸಾಹಿತ್ಯ ಮತ್ತು ದೊಡ್ಡವರ ಸಾಹಿತ್ಯ ಅಂತ ಬೇರೆ ಬೇರೆ ಇದ್ಯಾ?
ನಾ.ಡಿ.: ಇದೆಯಮ್ಮ ಇದೆ. ಈಗ ದೊಡ್ಡವರಿಗೆ ನಾವು ಏನನ್ನು ಹೇಳ್ತೇವೆ ಅದೆಲ್ಲವನ್ನೂ ಮಕ್ಕಳಿಗೆ ಹೇಳ್ಲಿಕ್ಕೆ ಆಗುವುದಿಲ್ಲ. ನಿಮ್ಮ ವಯಸ್ಸಿಗೆ ವಿಷಯಗಳ ಬಗ್ಗೆ ಇರುವಂತ ಆಸಕ್ತಿ, ಕುತೂಹಲ, ತಿಳ್ಕೋಬೇಕೂ ಅನ್ನುವ ಉತ್ಸಾಹ ಇದು ಬೇರೆ ರೀತಿ ಇರುತ್ತೆ. ದೊಡ್ಡವರ ರೀತಿ ಬೇರೆ, ಮಕ್ಕಳ ರೀತಿ ಬೇರೆ ಇರುತ್ತೆ ಅಲ್ವಾ. ಈಗ ನಕ್ಷತ್ರ ನೋಡಿದ್ರೆ ನಮಗೆ ಸಂತೋಷ ಆಗುವುದಿಲ್ಲ. ನಕ್ಷತ್ರವನ್ನ ಪ್ರಾರಂಭದಿಂದ ನೋಡ್ತಾ ಬಂದಿದೀವಿ. ಆದರೆ ಒಂದು ಮಗು ನಕ್ಷತ್ರ ನೋಡಿದಾಗ ಆ ಮಗುವಿಗೆ ಬಹಳ ಸಂತೋಷ ಆಗುತ್ತೆ. ಯಾಕಂದ್ರೆ ಅದಕ್ಕೆ ನಕ್ಷತ್ರ ಹೊಸದಾಗಿರುತ್ತೆ. ಅಂತಹದ್ಯಾವುದನ್ನೂ ಅದು ನೋಡಿರುವುದಿಲ್ಲ. ಅದರ ಬಗ್ಗೆ ಒಂತರ ಕುತೂಹಲ ಇರುತ್ತೆ. ಅದರ ಮಿಣುಕಾಟ ಕಂಡಾಗ ಮಗುವಿಗೆ ಬಹಳ ಆನಂದ ಆಗುತ್ತೆ. ಈ ಕಾರಣಕ್ಕೋಸ್ಕರ ಮಕ್ಕಳಿಗೋಸ್ಕರ ಬರೆಯುವುದೇ ಬೇರೆ, ಹಿರಿಯರಿಗೋಸ್ಕರ ಬರೆಯುವುದೇ ಬೇರೆ. ವಿಚಿತ್ರ ಏನೂಂದ್ರೆ ಮಕ್ಕಳಿಗೋಸ್ಕರ ನಾವು ಏನನ್ನ ಬರೀತೇವೆ ಅದನ್ನ ಹಿರಿಯರೆಲ್ಲ ಓದುತ್ತಾರೆ; ಆದರೆ ಹಿರಿಯರಿಗೆ ಬರದಿದ್ದನ್ನ ಮಕ್ಕಳಿಗೆ ಓದ್ಲಿಕ್ಕೆ ಆಗುವುದಿಲ್ಲ, ಅರ್ಥವಾಗುವುದಿಲ್ಲ. ಹೀಗಾಗಿ ಮಕ್ಕಳ ಸಾಹಿತ್ಯವೇ ಬೇರೆ. ಇರಬೇಕು; ಇದೇ ಅದು.
*ಎಚ್.ಎಂ. ರೋಹಿತ್ ಕುಮಾರ್ : ತೀರಾ ಚಿಕ್ಕವರಿಗಾಗಿ ಮತ್ತು ದೊಡ್ಡವರಿಗಾಗಿ ಕತೆಗಳು ಪದ್ಯಗಳು ಇದೆ ಸರ್. ಆದರೆ ನಮ್ಮಂತಹ ಹೈಸ್ಕೂಲು ವಯಸ್ಸಿನವರಿಗಾಗಿ ಕತೆ, ಪದ್ಯಗಳು ಇದ್ಯಾ, ಬರೀತಾ ಇದ್ದಾರಾ ಸರ್?
ನಾ. ಡಿ. : ಇದ್ಯೆಪ್ಪ ಇದೆ. ನಮ್ಮ ಜಿ.ಪಿ. ರಾಜರತ್ನಂ ಅವರು, ಹೊಯ್ಸಳ ಅಂತೊಬ್ಬ ಕವಿ, ಪುಟ್ಟಪ್ಪ ಅಂತ ದೊಡ್ಡ ಕವಿಗಳು ಬಹಳ ಜನ ಸಣ್ಣ ಮಕ್ಕಳಿಗೂ ಬರ್ದಿದ್ದಾರೆ. ಶಿಶುಪ್ರಾಸ ಅಂತ ಸಣ್ಣ ಸಣ್ಣ ಮಕ್ಕಳಿಗೆ ಬರೀತಾರೆ. ಹಾಗೇನೆ, ಸ್ವಲ್ಪ ವಯಸ್ಸಾದವರಿಗೆ ಅಂತ ಬೇರೆ ಸಾಹಿತ್ಯಾನೂ ಇದೆ ನಮ್ಮಲ್ಲಿ. ಅದನ್ನ ನೀವು ಓದ್ಬಹುದು.
*ಎಚ್.ಆರ್. ಮಧುರ : ನೀವು ಮಕ್ಕಳಿಗಾಗಿಯೇ ಹೆಚ್ಚು ಕತೆಯನ್ನು ಬರೆಯಲು ಸ್ಫೂರ್ತಿ ಏನು ಸರ್?
ನಾ. ಡಿ. : ಮಕ್ಕಳೇ ನನಗೆ ಸ್ಫೂರ್ತಿ. ಮಕ್ಕಳ ಜೊತೆಗೆ ಒಡನಾಡೋದು, ಮಕ್ಕಳು ಏನು ಮಾಡ್ತಾರೆ – ಏನು ಮಾತಾಡ್ತಾರೆ ಅನ್ನೋದನ್ನ ಗಮನಿಸೋದು. ಕೊನೆಗೆ ಮಕ್ಕಳಿಗೆ ಏನನ್ನ ಹೇಗೆ ಹೇಳಬಹುದು ಅನ್ನೋದನ್ನ ಯೋಚನೆ ಮಾಡೋದು. ಈಗ ನಾವು ದೊಡ್ಡವರಿಗೆ ಹೇಳಿದ ಹಾಗೆ ಮಕ್ಕಳಿಗೆ ಹೇಳುವುದಕ್ಕೆ ಆಗುವುದಿಲ್ಲ. ಇದೆಲ್ಲ ನಾನು ಶಾಲೆಗಳಿಗೆ ಹೋದಾಗ, ಬಹಳ ಜನ ಮಕ್ಕಳೊಂದಿಗೆ ಬೆರೆತಾಗ ನನಗೆ ಮಕ್ಕಳ ಸ್ವಭಾವ ಗುಣ ಗೊತ್ತಾಗುತ್ತೆ. ಅದಕ್ಕೆ ತಕ್ಕ ಹಾಗೆ ಬರೆಯುವ ಯತ್ನವನ್ನು ಮಾಡ್ತೇನೆ.
*ಎಚ್.ಕೆ. ಮಣಿಕಂಠ : ಮಕ್ಕಳ ಜೊತೆಗೆ ನಿಮಗೆ ಪರಿಸರವೂ ಮುಖ್ಯ ಏಕೆ ಸರ್?
ನಾ. ಡಿ. : ಬಹಳ ಒಳ್ಳೆಯ ಪ್ರಶ್ನೆ ಕೇಳಿದೆ ನೀನು. ಈಗ ನಿಮ್ಮ ಮನೆ ಮುಂದೆ ಒಂದು ಮರವಿದೆಯಪ್ಪ, ಆ ಮರವನ್ನು ನೀವು ಕಡಿದ್ರೆ ನಿಮ್ಮ ಮನೆಯೊಳಗಡೆಯೆಲ್ಲ ಬಿಸಿಲು ಸೆಕೆ ಧಗೆ ಎಲ್ಲಾ ಬಂದು ತುಂಬಿಕೊಳ್ಳುತ್ತೆ. ಆ ಮರವನ್ನ ನೀನು ಹಾಗೇ ಬಿಟ್ರೆ ತಂಪಾದ ಗಾಳಿ ಬೀಸುತ್ತಾ ಇರುತ್ತೆ, ನೀನು ಸಂತೋಷವಾಗಿರಬಹುದು ಅಲ್ಲಿ. ಹೀಗೆ ಪರಿಸರವನ್ನು ನಾವು ರಕ್ಷಣೆ ಮಾಡಿದ್ರೆ ಆ ಪರಿಸರ ನಮ್ಮನ್ನು ಕಾಪಾಡುತ್ತೆ. ಹಾಗೇನೆ ನಮ್ಮ ಮಕ್ಕಳ ಮನೋಭಾವವನ್ನು ಅರ್ಥಮಾಡಿಕೊಂಡು ಅದನ್ನು ಬೆಳೆಸಿದ್ರೆ ನಮಗದರಿಂದ ಸಂತೋಷ ಸಿಗುತ್ತೆ; ನಮ್ಮ ಮಕ್ಕಳು ಒಳ್ಳೆಯವರಾಗಿ ಬೆಳೆಯುತ್ತಾರೆ ನಾಳೆ. ಪರಿಸರ ಮತ್ತು ಮಕ್ಕಳು ನನ್ನ ದೃಷ್ಟಿಯಲ್ಲಿ ಎರಡೂ ಒಂದೇನೆ. ಪರಿಸರವನ್ನೂ ನಾವು ಕೆಡಿಸಬಾರದು; ಮಕ್ಕಳ ಮನಸ್ಸನ್ನೂ ಕೆಡಿಸಬಾರದು.
*ಎಚ್.ಎಂ. ಮಾಲತಿ : ಸರ್, ನಮ್ಮೂರಿಗೆ ಮೊನ್ನೆ ಎಂಟು ಆನೆಗಳು ಬಂದಿದ್ವು. ಕಾಡು ಪ್ರಾಣಿಗಳು ಪದೇ ಪದೇ ನಾಡಿಗೆ ಬರ್ತಿವೆ. ಯಾಕೆ?
ನಾ. ಡಿ. : ತಪ್ಪು ನಮ್ದೇನೆ. ಕಾಡಿನಲ್ಲಿ ನಾವಿವತ್ತು ಏನ್ ಮಾಡ್ತಾ ಇದ್ದೇವೆ? ಹೆದ್ದಾರಿಗಳನ್ನ ನಿರ್ಮಾಣ ಮಾಡ್ತಾ ಇದ್ದೇವೆ, ಅಣೆಕಟ್ಟುಗಳನ್ನು ಕಟ್ತಾ ಇದ್ದೇವೆ, ಕಾರ್ಖಾನೆಗಳನ್ನ ತೆಗಿತೀವಿ. ಕಾಡಲ್ಲಿ ಎಲ್ಲಾ ಗದ್ದಲಗಳನ್ನ ಎಲ್ಲಾ ಗಲಾಟೆಗಳನ್ನ ಎಲ್ಲಾ ಅನಾಹುತಗಳನ್ನ ಮಾಡ್ತಾ ಇದ್ದೇವೆ. ಅಂದಮೇಲೆ ಆ ಕಾಡಿನಲ್ಲಿಯೇ ಬದುಕಿರುವಂಥ ಪ್ರಾಣಿಗಳು ಎಲ್ಲಿ ಹೋಗಬೇಕು ಹೇಳು? ಆನೆಗಳು ಎಲ್ಲಿ ಹೋಗಬೇಕು, ಹುಲಿಗಳು ಎಲ್ಲಿ ಹೋಗಬೇಕು? ಅವು ಏನು ಮಾಡ್ತಾವೆ. ಹತ್ತಿರದಲ್ಲಿರುವ ಊರಿಗೆ ಬರ್ತಾವೆ. ಅವಕ್ಕೇನು ಊರು ನೋಡುವ ಹುಚ್ಚಿಲ್ಲ. ಹುಲಿ ಮೈಸೂರು ನೋಡಬೇಕು ಅಂತ ಬರುವುದಿಲ್ಲ. ಮನುಷ್ಯ ಮಾಡ್ತಾನದಕ್ಕೆ ಪೇಟೆಗೆ ಬರುವ ಹಾಗೆ. ತನ್ನನ್ನು ತಿನ್ನುವ ಹಾಗೆ ಮನುಷ್ಯನೇ ಮಾಡ್ತಾನೆ. ಇದು ಮನುಷ್ಯಂದೇ ತಪ್ಪು. ಪ್ರಾಣಿಗಳದ್ದು ಏನೂ ತಪ್ಪಿಲ್ಲ. ಅವಕ್ಕೆ ಬದುಕಲಿಕ್ಕೆ ಬೇಕಾದ ವಾತಾವರಣವನ್ನ ನಾವು ಸೃಷ್ಟಿ ಮಾಡಿದ್ರೆ ಅವು ಸಂತೋಷವಾಗಿ ತಮ್ಮ ಕಾಡಿನಲ್ಲಿ ಇರ್ತವೆ.
*ಎಸ್.ಎಂ. ಮನೋಜ : ಶಾಲೆಗಳು ಹೇಗಿರಬೇಕು ಅನ್ಸುತ್ತೆ ಸರ್ ನಿಮಗೆ?
ನಾ. ಡಿ. : ಸಾಯಂಕಾಲ ನಾಲ್ಕು ಗಂಟೆ ಆದ ಕೂಡಲೆ ಕೊನೆ ಬೆಲ್ ಹೊಡಿಯತ್ತಲ್ಲ. ಆಗ ನೀವೆಲ್ಲ ಪಾಟಿಚೀಲವನ್ನು ಹೊತ್ತುಕೊಂಡು ಹೋ ಅಂತ ಕೂಗ್ತಾ ಹೊರಗೆ ಓಡ್ತೀರಲ್ಲ. ಯಾಕೆ ಓಡಿ ಹೋಗ್ತೀರಿ ನೀವೆಲ್ಲ? ನಿಮಗೆ ಒಂದು ಬಿಡುಗಡೆ ಸಿಗುತ್ತೆ, ಮನೆಗೆ ಹೋಗಬಹುದು ಅನ್ನೋ ಖುಷಿ ಸಿಗುತ್ತೆ ನಿಮಗೆ. ಆ ಖುಷಿ ನಮ್ಮ ಶಾಲೆಗಳಲ್ಲಿ ಸಿಗುತ್ತಿಲ್ಲ. ನಾಲ್ಕು ಗೋಡೆ ಒಳಗಡೆ ಮೇಷ್ಟ್ರು ಏನೋ ಕೊರೀತಾ ಇರ್ತಾರೆ. ಅದನ್ನ ತಪ್ಪಿಸಿಕೊಳ್ಳಲು ನಾವು ಕೊನೆ ಬೆಲ್ಲನ್ನ ಕಾಯ್ತಾ ಇರ್ತೇವೆ. ಶಾಲೆ ಅಂದರೆ ಇಂದು ಬಂಧನ ಆಗಿದೆ. ಶಾಲೆ ಒಳ್ಳೆಯ ರೀತಿಯಲ್ಲಿರಬೇಕು. ಬೆಳಿಗ್ಗೆ ಎದ್ದಕೂಡಲೆ ಮಕ್ಕಳು ಶಾಲೆಗೆ ಹೋಗುವ ಉತ್ಸಾಹ ತೋರಿಸಬೇಕು. ಹಾಗೆ ಉತ್ಸಾಹ ತೋರಿಸುವಂತೆ ನಮ್ಮ ಶಿಕ್ಷಣ ಇರಬೇಕು, ನಮ್ಮ ಉಪಾಧ್ಯಾಯರಿರಬೇಕು, ಶಾಲೆಗಳನ್ನು ನಡೆಸುವಂತಹ ಸರ್ಕಾರ ಇರಬೇಕು.
*ಅಂಜಲಿ : ಸರ್, ನಾವೂ ಕತೆಗಳನ್ನು ಬರೀತಾ ಇದ್ದೀವಿ. ನಮ್ಮದು ‘ಅಳ್ಳೀಮರ’ ಪತ್ರಿಕೆ ಇದೆ. ಕತೆ ಬರಿಯೋಕೆ ಏನೇನು ಬೇಕು ಸರ್?
ನಾ. ಡಿ. : ಕತೆ ಬರೀಲಿಕ್ಕೆ ಮೊದಲನೆಯದಾಗಿ ಭಾಷೆ ಬೇಕು. ಆ ಭಾಷೆ ಎಲ್ಲಿ ಸಿಗುತ್ತೆ? ಅಂಗಡಿಯಲ್ಲಿ ಸಿಗುತ್ತಾ? ಇಲ್ಲ. ಆ ಭಾಷೆ ನಿಮಗೆ ಸಿಗಬೇಕಾದ್ರೆ ಪುಸ್ತಕಗಳನ್ನ ಓದಬೇಕು. ನಿನಗೆ ಕತೆ ಬರೀಬೇಕು ಅನ್ನೋ ಆಸೆ ಇದ್ರೆ ನೀನು ಮತ್ತೊಬ್ರು ಬರೆದ ಕತೆಗಳನ್ನು ಓದಬೇಕು. ಅವರು ಹೇಗೆ ಬರೆದಿದ್ದಾರೆ, ಯಾಕೆ ಹಾಗೆ ಬರೆದಿದ್ದಾರೆ, ಸಂಭಾಷಣೆ ಹೇಗಿದೆ, ಪ್ರಾರಂಭ ಹೇಗೆ ಮಾಡಿದ್ದಾರೆ, ಮುಕ್ತಾಯ ಹೇಗೆ ಮಾಡಿದ್ದಾರೆ ಇದನ್ನೆಲ್ಲಾ ನೀನು ತಿಳಕೋಬೇಕು. ತಿಳ್ಕೊಂಡ ಮೇಲೆ ನೀನು ಕತೆ ಬರೀಲಿಕ್ಕೆ ಪ್ರಾರಂಭ ಮಾಡಬೇಕು. ನಿನಗೊಂದು ವಸ್ತು ಸಿಗುತ್ತೆ ಅಂತಿಟ್ಟುಕೊ, ಬೇಡ, ನೀನೇನೂ ಕಷ್ಟಪಡಬೇಡ. ನಿಮ್ಮಜ್ಜಿ ಹತ್ತಿರ ಒಂದು ಕತೆ ಕೇಳು. ಅಜ್ಜಿ ಇದ್ದಾರಾ ನಿಂಗೆ?
*ಅಂಜಲಿ : ಇದ್ದಾರೆ ಸಾ
ನಾ. ಡಿ. : ಅಜ್ಜಿ ಹತ್ತಿರ ಕತೆ ಕೇಳು. ಅಜ್ಜಿ ಹೇಳಿದ ಕತೇನಾ ನಿನ್ನದೇ ವಾಕ್ಯದಲ್ಲಿ ನೀನು ಕುತ್ಕೊಂಡು ಬರಿ. ಅದೇ ಕತೆ, ಅದೇ ಕತೆಯನ್ನ ನಿನ್ನದೇ ಸ್ಟೈಲ್ನಲ್ಲಿ ನಿನ್ನದೇ ವಾಕ್ಯದಲ್ಲಿ ಬರೆ. ಹಾಗೆ ಕತೆಗಳನ್ನ ಬರೀತಾ ಬರೀತಾ ಅಭ್ಯಾಸ ಮಾಡಬಹುದು, ಕತೆಗಳನ್ನ ಬರೆಯುವ ಕಲೆಯನ್ನ ನಾವು ಸಾಧಿಸಿಕೋಬಹುದು. ನನ್ನಲ್ಲಿ ಬರೆಯುವ ಸಾಧ್ಯತೆ ಇದೆ, ನಾನು ಖಂಡಿತಾ ಬರೀತೇನೆ ಅಂತ ಹಟ ಹಿಡಿದುಕೊಂಡು ಬರೆದರೆ ನೀನೂ ಕೂಡ ದೊಡ್ಡ ಲೇಖಕಿ ಆಗ್ತೀಯ.
*ಎಚ್.ಎಸ್. ಶೇಖರ : ಸರ್, ಈಗಿನ ಕವನಗಳು ಹಾಡುವುದಕ್ಕೇ ಆಗ್ತಿಲ್ಲ. ಯಾಕಿಂಗೆ ಸರ್?
ನಾ. ಡಿ. : ಒಳ್ಳೆಯ ಪ್ರಶ್ನೆ ಕೇಳಿದ್ಯಪ್ಪ. ಏನಾಗಿದೆ ಅಂದ್ರೆ, ಈಗಿನ ಕವಿತೆಗಳೆಲ್ಲ ಬೇರೆ ದೇಶದ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿ ಬರೀತಾ ಇದ್ದಾರೆ. ಇಂಗ್ಲಿಷ್ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿ ಕವಿತೆಗಳನ್ನ ಬರೀತಾ ಇದ್ದಾರೆ. ನಮ್ಮ ಲೇಖಕರಲ್ಲಿ ಮತ್ತೊಂದು ನಂಬಿಕೆ ಏನಂದ್ರೆ, ಹಾಡುವ ಕವಿತೆ ಬೇರೆ ಓದುವ ಕವಿತೆ ಬೇರೆ ಅಂತ. ಹೀಗಾಗಿ ಬಹಳ ಜನ ಇವತ್ತು ಹಾಡುವ ಕವಿತೆಗಳನ್ನ ಬರೆಯುವುದಿಲ್ಲ. ಹಾಡು ಅಂದ್ರೆ ಕವಿತೆ ಅಲ್ಲ, ಅದು ಹಾಡು ಅಂತ ಅವರು ಹೇಳ್ತಾರೆ. ಇದು ತಪ್ಪು ಕಲ್ಪನೆ. ಹಾಡಿನ ಮೂಲಕವೂ ಕವಿತೆಯ ಸತ್ವವನ್ನ ಹೇಳಬಹುದು. ನಮ್ಮ ಪಾಡಿಗೆ ನಾವು ಬರೆದರೆ ಆಯ್ತು. ಗೋಪಾಲಕೃಷ್ಣ ಅಡಿಗರಂತಹ ಕವಿಗಳ ಕವಿತೆಗಳನ್ನ ಇವತ್ತೂ ಹಾಡ್ತಾ ಇದ್ದಾರೆ.
*ಎಚ್.ಜಿ.ಕುಸುಮ : ಸರ್, ನೀವು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದೀರಿ. ನಿಮಗೆ ಹೇಗನ್ನಿಸ್ತು ಸಾರ್?
ನಾ. ಡಿ. : ಏನೂ ಅನ್ಸುದಿಲ್ಲ. ಸ್ವಲ್ಪ ಸಂತೋಷ ಆಗುತ್ತೆ. ನಾನು ಸುಮಾರು ಐವತ್ತು ವರ್ಷಗಳಿಂದ ಬರೀತಾ ಬಂದಿದ್ದೇನೆ ಕನ್ನಡದಲ್ಲಿ. ನಾನು ಬರೆದ ಕತೆಗಳು, ಕಾದಂಬರಿಗಳು, ಮಕ್ಕಳ ಪುಸ್ತಕಗಳನ್ನ ಬಹಳ ಜನ ಓದಿದ್ದಾರೆ. ಹೀಗೆ ಓದಿದವರಿಗೆ ನನ್ನನ್ನ ಅಧ್ಯಕ್ಷ ಮಾಡಬೇಕು ಅನ್ನಿಸಿದೆ; ಅದೊಂದು ಸಂಪ್ರದಾಯ ನಮ್ಮಲ್ಲಿ. ಬಹಳ ದೊಡ್ಡ ಲೇಖಕರನ್ನು ಅಧ್ಯಕ್ಷ ಅಂತ ಕರೆದು, ಗೌರವಿಸಿ, ಅವರ ಮಾತುಗಳನ್ನು ಕೇಳುವುದು, ಸಾವಿರಾರು ಜನ ಸೇರುವುದು ಒಂದು ಸಂಪ್ರದಾಯ ನಮ್ಮಲ್ಲಿ. ಹಾಗಾಗಿ ನನ್ನನ್ನೂ ಕೂಡ ಈ ಸಲ ಅಧ್ಯಕ್ಷ ಅಂತ ಮಾಡಿದ್ದಾರೆ. ಜನವರಿ ತಿಂಗಳಲ್ಲಿ ಮಡಿಕೇರಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ನಾನು ಅಧ್ಯಕ್ಷ ಅಂತ ನೇಮಕವಾಗಿದ್ದೇನೆ.
*ಎಚ್.ಕೆ. ಸಿದ್ಧ : ಒಬ್ಬ ಸಾಹಿತಿ ಹೇಗಿರಬೇಕು ಸಾರ್?
ನಾ. ಡಿ. : ಸಾಹಿತಿಯಾದವನು ಸರಳವಾಗಿರಬೇಕು. ನಾನು ಬರೆದಿದ್ದು ನಿಮಗೆ ಹೇಗೆ ಅರ್ಥವಾಗುತ್ತೋ, ಹಾಗೆ ನಾನೂ ಕೂಡ ನಿಮಗೆ ಅರ್ಥವಾಗಬೇಕು. ಅಲ್ಲಿ ದೊಡ್ಡಸ್ತಿಕೆ ಗಿಡ್ಡಸ್ತಿಕೆ ಏನೂ ಇಲ್ಲ. ದೊಡ್ಡವರ ಹತ್ತಿರ ಮಾತ್ರ ಮಾತಾಡಬೇಕು, ಚಿಕ್ಕವರ ಹತ್ತಿರ ಮಾತಾಡಬಾರದು ಅಂತೇನೂ ಇಲ್ಲ. ಅದು ಕೆಲವರ ಸ್ವಭಾವ. ಕೆಲವರು ಬಹಳ ಗಂಭೀರವಾಗಿ ಕುಳಿತಿರ್ತಾರೆ, ಕೆಲವರು ನಗ್ತಾ ನಗ್ತಾ ಇರ್ತಾರೆ. ಅದು ಅವರವರ ಸ್ವಭಾವಕ್ಕೆ ಬಿಟ್ಟಿದ್ದು.
Saturday, 14 December 2013
ಹೋಬಳಿಮಟ್ಟದ ಪ್ರತಿಭಾ ಕಾರಂಜಿ 2013
ನಮ್ಮ ಶಾಲೆಯ 45 ಜನ ವಿದ್ಯಾರ್ಥಿಗಳು ಸುಮಾರು 18ವಿಭಾಗಗಳಲ್ಲಿ ಬಾಗವಹಿಸಿದ್ದರು.
ಎರಡು ವಿಭಾಗ ಬಿಟ್ಟರೆ ಉಳಿದೆಲ್ಲ ಸ್ಪರ್ಧೆಗಳಲ್ಲಿ ನಮ್ಮ ಮಕ್ಕಳು ಪಾರಮ್ಯ ಮೆರೆದಿದ್ದಾರೆ.
ಹತ್ತು ಸ್ಪರ್ಧೆಗಳಲ್ಲಿ ಮೊದಲ ಬಹುಮಾನ ಪಡೆದು ಮತ್ತೆ 40 ಜನ ತಾಲೂಕುಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಹೇಗಿದೆ ನನ್ನ ರಂಗೋಲಿ? ನನಗೂ ಬಹುಮಾನ ಬಂದಿದೆ.
ಕಂಸಾಳೆನೂ ಮಾಡುತ್ತೇವೆ ನಾವು; ನಮಗೂ ಬಹುಮಾನ ಬಂದಿದೆ.
ಬೆಳಕು ಹಂಚಿದ ಬಾಲಕ ನಾಟಕ; ನಮಗೂ ಬಹುಮಾನ ಬಂದಿದೆ
ಬಹುಮಾನ ಬಂದಾಗ ಹೀಗೆ ಕುಷಿ ಆಗುತ್ತಲ್ವಾ?
ಎರಡು ತಲೆ ಇರುವ ನನಗೂ ಬಹುಮಾನ ಬಂದಿದೆ.
ನಾವೆಲ್ಲ ಪ್ರತಿಭಾ ಕಾರಂಜಿಗೆ ಹೋದವರು; ನಮಗೆಲ್ಲಾ ಬಹುಮಾನ ಬಂದಿದೆ
Friday, 29 November 2013
ಮಗುವೊಂದು ವ್ಯಕ್ತಿ
-ರೂಪ ಹಾಸನ
ªÀÄUÀÄ«UÉ K£ÀÄ
w½AiÀÄÄvÀÛzÉ? CzÀÄ £ÁªÀÅ ºÉýPÉÆlÖ ºÁUÉ PÀ°ÃvÁ ºÉÆÃUÀÄvÉÛ. CzÀPÉÌ vÀ£ÀßzÉà DzÀ
ªÀåQÛvÀé EgÀĪÀÅ¢®è’ J£ÀÄߪÀÅzÀÄ £ÀªÀÄä ¸ÁªÀiÁ£Àå C©ü¥ÁæAiÀÄ. DzÀgÉ §ºÀ¼À
¸ÀÆPÀëöäªÁV ªÀÄUÀĪÉÇAzÀ£ÀÄß UÀªÀĤ¸ÀÄwÛzÀÝgÉ F £ÀªÀÄä C©ü¥ÁæAiÀÄ vÀ¥ÀÄà JAzÀÄ
¸Á©ÃvÁUÀÄvÀÛzÉ. ªÀÄPÀ̼À ªÀÄ£À¸ÀÄì MAzÀÄ PÀ¥ÀÄà ºÀ®UÉ EzÀÝ ºÁUÉ, C°è £ÁªÀÅ
K£À£Àß ¨ÉÃPÁzÀgÀÆ §jçºÀÄzÀÄ JAzÀÄ £ÀA©zÀgÉ CzÀQÌAvÁ ¥ÉzÀÄÝvÀ£À E£ÉÆßA¢®è.
ªÉÊzÀåQÃAiÀÄ ¸ÀA±ÉÆÃzsÀ£ÉUÀ¼À ¥ÀæPÁgÀ ¥ÀæwAiÉÆAzÀÄ ªÀÄUÀĪÀÇ MAzÀÄ ªÀåQÛ.
¥ÀæwAiÉÆAzÀÄ ªÀÄUÀÄ«£À®Æè EgÀĪÀ ªÀÄ£À¸Àì£ÀÄß UËgÀ«¹ ªÀåQÛ JAzÀÄ
£ÀA§¯ÁUÀÄvÀÛzÉ.
ºÀ¹ªÁzÁUÀ C¼ÀĪÀÅzÀ£ÀÄß, ºÉƸÀ DnPÉ PÉÊUÉ
¹PÁÌUÀ ¸ÀAvÀ¸À¢AzÀ £ÀUÀĪÀÅzÀ£ÀÄß, vÀ£Àß vÁ¬ÄAiÀÄ£Àß PÀAqÀ vÀPÀët ¨ÉÃgÉAiÀĪÀgÀ
PÉʬÄAzÀ fVzÀÄ vÁ¬ÄAiÀÄ£ÀÄß C¦àPÉƼÀÄîªÀÅzÀ£ÀÄß, vÀ£ÀUÉ ¨ÉÃPÁzÀ ªÀ¸ÀÄÛ
¹UÀ¢zÁÝUÀ ¹lÄÖUÉƼÀÄîªÀÅzÀ£ÀÄß, ªÉÄjæUÉÆà gËAqï wgÀÄUÀĪÀÅzÀ£ÀÄß £ÉÆÃr PÉÊ PÁ®Ä
§rzÀÄ DqÀĪÀÅzÀ£ÀÄß ªÀÄUÀÄ«UÉ ºÀÄnÖzÀ vÀPÀët AiÀiÁgÀÄ PÀ°¸ÀÄvÁÛgÉ? ªÀÄUÀÄ
zÉÆqÀØzÁUÀÄvÁÛ ºÉÆÃzÀ ºÁUÉ, £ÁªÀÅ K£À£Éßà ºÉÆgÀV¤AzÀ PÀ°¹zÀgÀÆ, CzÀ£Àß
UÀ滸ÀĪÀ ±ÀQÛ, w½zÀÄPÉƼÀÄîªÀ, CxÉÊð¹PÉƼÀÄîªÀ ªÀÄ£À¸ÀÄì ªÀÄUÀÄ«£À°è
ºÀÄnÖ¤AzÀ¯Éà EgÀÄvÀÛzÉ. vÁ£ÀÄ ¨É½ÃvÁ vÀ£Àß ¸ÀÄvÀÛ°£À ¥Àj¸ÀgÀªÀ£Àß ªÀÄUÀÄ vÀ£Àß
zÀȶÖPÉÆãÀzÀAvÉAiÉÄà CxÉÊð¸ÀÄvÁÛ ºÉÆÃUÀÄvÀÛzÉ. ¥ÀÄlÖ ªÀÄUÀÄ«UÉ ¸ÀºÀ vÀ£ÀßzÉÃ
EµÁÖ¤µÀÖUÀ¼ÀÄ, ¤®ÄªÀÅUÀ¼ÀÄ, ¸Àé¨sÁªÀ EgÀĪÀÅzÀ£ÀÄß UÀªÀĤ¸À§ºÀÄzÀÄ. PÉ®ªÀÅ
ªÀÄPÀ̽UÉ ¹» EµÀÖ DzÉæ, PÉ®ªÀPÉÌ G¦à£À ¥ÀzÁxÀð EµÀÖ. PÉ®ªÀÅ gÁV ªÀÄrØAiÀÄ£Àß
RĶ¬ÄAzÀ wAzÉæ, E£ÀÄß PÉ®ªÀÅ ªÀÄÄR ¹AqÀj¸ÀÄvÀÛªÉ. PÉ®ªÀÅ PÀAzÀªÀÄäUÀ½UÉ ©¹©¹
¤ÃgÀ°è UÀAmÉUÀlÖ¯É ¸ÁߣÀ ªÀiÁr¹zÀgÀÆ PÀªÀÄPï- QªÀÄPï J£ÀÄߪÀÅ¢®è. E£ÀÄß PÉ®ªÀÅ ªÀÄPÀ̼ÀÄ
¸Àé®à ©¹¤ÃgÀÄ ªÉÄʪÉÄÃ¯É ©¢ÝzÉÝà vÀqÀ, K£ÉÆà C£ÁºÀÄvÀªÉà DAiÀÄÄÛ JA§AvÉ
QjZÁqÀÄvÀÛªÉ. »ÃUÉ ¥ÀæwAiÉÆAzÀÄ ªÀÄUÀĪÀÇ vÀ£ÀßzÉà DzÀ «²µÀÖvɬÄAzÀ ¥ÀævÉåÃPÀ
ªÀåQÛ£Éà DVgÀÄvÀÛzÉ. CzÀ£ÀÄß UÀÄgÀÄw¸ÀĪÀAvÁ UËgÀ«¸ÀĪÀAvÁ ªÀÄ£ÉÆèsÁªÀ
£ÀªÀÄä°è ªÀÄÆqÀ¨ÉÃPÀµÉÖÃ.
¥ÀæwAiÉÆAzÀÄ ªÀÄUÀÄ«UÀÆ »jAiÀÄgÀAvÉAiÉÄÃ,
CxÀªÁ CzÀQÌAvÁ ¸ÀÆPÀëöäªÀÇ ¸ÀAªÉÃzÀ£Á²Ã®ªÀÅ DzÀ J®è ¸À¤ßªÉñÀUÀ½UÀÆ ¸ÀàA¢¹
ªÀÄÆqÀĪÀ ¸ÀAªÉÃzÀ£ÉUÀ½ªÉ. CzÀ£ÀÄß ¤®ðQë¹ £ÀªÀÄä C¤¹PÉ, C©ü¥ÁæAiÀÄUÀ¼À£É߯Áè
ªÀÄUÀÄ«£À ªÉÄÃ¯É §®ªÀAvÀªÁV ºÉÃgÀĪÀÅzÀjAzÀ ªÀÄUÀÄ«£À ¸ÀÆPÀëöä ¸ÀAªÉÃzÀ£ÉUÀ¼ÀÄ
WÁ¹UÉÆAqÀÄ, zÉÆqÀØzÁzÀAvɯÁè ¸ÀévÀAvÀæ ªÀåQÛvÀé E®èzÉà QüÀjªÉĬÄAzÀ,
ªÀÄ£ÉÆêÉÃzÀ£É¬ÄAzÀ £ÀgÀ¼ÀÄvÀÛªÉ J£ÀÄßvÁÛgÉ ªÀÄPÀ̼À ªÀiÁ£À¹PÀ vÀdÕgÀÄ. EA¢£À
£ÀªÀÄä ªÀÄPÀ̼ÀÄ »A¢£À ¦Ã½UÉUÉ ºÉÆð¹zÀgÉ ºÉZÀÄÑ §Ä¢ÞªÀAvÀgÀÄ, ¥Àæw¨sÁªÀAvÀgÀÄ.
DzÀgÉ EA¢£À ²PÀëtzÀ ºÉ¸Àj£À°è CªÀgÀ£ÀÄß ºÉZÀÄÑ £É£À¦lÄÖPÉƼÀÄîªÀ, ªÀiÁ»w
¸ÀAUÀ滸ÀĪÀ, vÀÄA©nÖzÀÝ£ÀÄß ºÉÆgÀZÉ®ÄèªÀ ‘«Ä¤ PÀA¥ÀÆålgï’ UÀ¼ÁV ªÀiÁvÀæ
vÀAiÀiÁj¸À¯ÁUÁÛ EzÉ. CªÀgÀ°ègÀĪÀ ¸ÀAVÃvÀ, £ÀÈvÀå, PÀ¯É, QæÃqÉAiÀÄAvÁ
¥Àæw¨sÉUÀ½UÉ MA¢µÀÄÖ ¥ÉÆæÃvÁìºÀ zÉÆgÀQzÀgÀÆ CªÀgÀ eÁtvÀ£À, ¸ÀÈd£À²Ã®vÉ,
ªÉÊZÁjPÀvÉUÉ ªÀÄvÀÛµÀÄÖ ªÉÄgÀÄUÀÄ ¤ÃqÀĪÀ ¥ÀæAiÀÄvÀßUÀ¼ÀÄ £ÀqÉAiÀÄĪÀÅzÀÄ
PÀrªÉÄ. CªÀgÉƼÀV£À PÀÄvÀƺÀ®zÀ ¥Àæ±ÉßUÀ¼ÀÄ ºÉaÑ£À ¨Áj ºÉÆgÀ§gÉÆÃzÉà E®è.
aPÀ̪ÀÄPÀ̼ÁVzÁÝV£À CªÀgÀ PÀÄvÀƺÀ®ªÀ£ÀÄß, C¥Àj«ÄvÀ ¥Àæ±ÉßUÀ¼À£ÀÄß ªÉÄ®èUÉ
£ÁªÉà ªÀÄÄgÀÄn ©nÖjÛë. ªÀÄPÀ̼À zÉúÀPÉÌ ‘ AiÀÄƤ¥sÁgÀA ’ vÉÆr¹ KPÀjÃw PÁuÉÆÃ
ºÁUÉ ªÀiÁrzÀAvÉãÉà CªÀgÀ ªÀÄ£À¸ÀÄì-§Ä¢ÞAiÀÄ£ÀÆß AiÀÄƤ¥sÁgÀA vÉÆr¹ KPÀjÃw
ªÀiÁqÀĪÀÅzÀPÉÌ ºÉÆgÀlÄ ©nÖzÉÝÃªÉ £ÁªÀÅ.
DzÀgÉ ¥ÀæwAiÉÆAzÀÄ ªÀÄUÀÄ«UÀÆ CzÀgÀzÉÝÃ
ªÀÄ£À¹ìzÉ, ¨sÁªÀ£ÉUÀ½ªÉ, £ÉÆêÀÅ-£À°ªÀÅUÀ½ªÉ. ªÀÄUÀÄ vÀ£Àß ¸ÀÄvÀÛ ªÀÄÄvÀÛ®
WÀl£É, C£ÀĨsÀªÀUÀ¼À£ÀÄß £ÀªÀÄVAvÀ®Æ wêÀæªÁV UÀªÀĤ¸ÀÄwÛgÀÄvÀÛzÉ. eÉÆvÉUÉ
CzÀPÉÌ vÀ£ÀßzÉà DzÀ C©ü¥ÁæAiÀĪÀÇ EzÉ! vÀ£Àß ªÉÄïÁUÀĪÀ MvÀÛqÀ, £ÉÆêÀÅ,
CªÀªÀiÁ£À, £ÁªÀÅ vÉÆÃgÀĪÀ ¤®ðPÀëöå¢AzÀ ªÀÄUÀÄ«£À ªÀÄ£À¸ÀÄ ªÀÄÄzÀÄr
ºÉÆÃUÀÄvÀÛzÉ. ªÀÄvÉÛ CzÀ£ÀÄß CgÀ½¸ÀĪÀÅzÀÄ PÀµÀÖzÀ PÉ®¸À. ªÀÄUÀÄ«£À §UÉÎ MAzÀÄ
¸ÀtÚ UÀªÀĤ¸ÀÄ«PÉ PÀÆqÀ CzÀPÉÌ RĶ PÉÆqÀÄvÀÛzÉ. vÀ£ÀÆä®PÀ CzÀÄ vÀ£ÀߣÉßÃ
UËgÀ«¹PÉƼÀÄîvÀÛzÉ. DvÀ䫱Áé¸À ¨É¼À¹PÉƼÀÄîvÀÛzÉ. »ÃUÁUÉà ªÀÄUÀÄ«£À eÉÆvÉ
vÉÆqÀVPÉƼÀÄîªÁUÀ £ÀªÀÄä ªÀiÁvÀÄ, £ÀqÀªÀ½PÉ J®èªÀÇ UÁf£À eÉÆvÉUÉ
ªÀåªÀºÀj¸ÀĪÀµÉÖà ¸ÀÆPÀëöäªÁVgÀ¨ÉÃPÀÄ. UÁf£À ªÉÄÃ¯É £Á«qÉÆà PÉʨÉgÀ¼ÀÄ PÀÆqÀ
UÀÄgÀÄvÁV G½zÀÄ©qÀÄvÉÛ C®èªÉÃ?
»jAiÀÄgÁzÀ £ÁªÀÅ ¥ÀæwAiÉÆAzÀÄ ªÀÄUÀĪÀÇ
vÀ£Àß ¨sÁªÀ£ÉUÀ½AzÀ vÀ£ÀßAvÉ vÁ£Éà «PÀ¹¹, CgÀ¼ÀĪÀÅzÀPÉÌ, ¥ÀjªÀļÀ ¸ÀƸÉÆâPÉÌ
©qÀ¨ÉÃPÀÄ. CzÀPÉÌ vÀPÀÌ ¥ÀÆgÀPÀ ¥Àj¸ÀgÀªÀ£ÀßµÉÖà £ÁªÀÅ MzÀV¹ PÉÆqÀ¨ÉÃPÀÄ.
ªÀÄUÀÄ«£À ªÀÄ£À¸ÀÄì «±Á® £À¢AiÀÄAvÉ. CzÀÄ vÀ£ÀUÉ ¨ÉÃPÉAzÀAvÉ, ¨ÉÃPÁzÀ PÀqÉUÉ
ºÀjzÀÄ ¨ÉÃPɤ¹zÀÝ£ÀÄß ¥ÀqÉAiÀħ®èzÀÄ. AiÀiÁªÀÅzÀÄ ¸ÀjAiÀiÁzÀzÀÄÝ? AiÀiÁªÀÅzÀÄ
vÀ¥ÀÄà CAvÀ ºÉýPÉÆqÀĪÀÅzÀµÉÖà £ÀªÀÄä PÀvÀðªÀå. CzÀ£ÀÄß ¥ÀqÉAiÀÄĪÀ zÁjUÀ¼À£Àß
ªÀÄUÀÄ vÁ£Éà w½ÃvÁ ºÉÆÃUÀÄvÉÛ. ºÁUÉà ªÀÄUÀĪÀ£Àß £ÀªÀÄä «ÄwAiÀÄ°èAiÀĵÉÖÃ
CxÉÊð¹PÉÆAqÀÄ CzÀPÉÌ ¸ÀAPÉÆÃ¯É vÉÆr¸ÀĪÀ ‘jAUï ªÀiÁ¸ÀÖgï’ UÀ¼ÀÄ £ÁªÁUÀ¢gÉÆÃzÉÃ
F ªÀÄPÀ̼À ¢£ÁZÀgÀuÉAiÀÄAzÀÄ £ÁªÀÅ CªÀjUÉ ¤ÃqÉÆà CªÀÄÆ®å PÁtÂPÉ.
Tuesday, 26 November 2013
ಒಳ್ಳೆಯ ಗೆಳತಿ ಶಾಮಂತಿ
-ಡಿ. ಕೆ. ರಮೇಶ
ಕೃಪೆ : ಪ್ರಜಾವಾಣಿ ಸಾಪ್ತಾಹಿಕ ಪುರವಣಿ
(ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕನ್ನಮಂಗಲ. ಶಿಡ್ಲಘಟ್ಟ ತಾ|| ಚಿಕ್ಕಬಳ್ಳಾಪುರ ಜಿ|| ಇಲ್ಲಿನ ಆಂಗ್ಲಭಾಷಾ ಶಿಕ್ಷಕರಾದ ಕಲಾಧರ್ ಅವರ ಕಲೆಯ ಧಾರೆ ಅವರ ವಿದ್ಯಾರ್ಥಿಗಳ ಮೂಲಕ ಹರಿಯುತ್ತಿರುವ ಪರಿಯ ನಾಡಿನ ಹಿರಿಯ ಪತ್ರಿಕೆ ಪ್ರಜಾವಾಣಿ ಗುರುತಿಸಿದ್ದು, ಈಗ ಅಳ್ಳೀಮರದಲ್ಲಿ.)
ಶಾಮಂತಿ 3
ಸಂ: ಎಸ್. ಕಲಾಧರ
ಪು: 96; ಬೆ: ರೂ. 100
ಪ್ರ: ಸ್ನೇಹ ಪ್ರಕಾಶನ, ಕನ್ನಮಂಗಲ, ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ
ಸಂ: ಎಸ್. ಕಲಾಧರ
ಪು: 96; ಬೆ: ರೂ. 100
ಪ್ರ: ಸ್ನೇಹ ಪ್ರಕಾಶನ, ಕನ್ನಮಂಗಲ, ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ
ಪುಟ್ಟ ಮಕ್ಕಳೇ, ಪುಟಾಣಿ ಮಕ್ಕಳೇ,
ಚಂದದೊಂದು ಹೊಸ ಪುಸ್ತಕ ಬಂದಿದೆ. ಪುಸ್ತಕ ಬರೆದಿರೋರು ಯಾರು ಗೊತ್ತಾ? ನಿಮ್ಮಂಥ ಚಿನ್ನಾರಿಗಳು. ಅವರು ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು.
ಚಂದದೊಂದು ಹೊಸ ಪುಸ್ತಕ ಬಂದಿದೆ. ಪುಸ್ತಕ ಬರೆದಿರೋರು ಯಾರು ಗೊತ್ತಾ? ನಿಮ್ಮಂಥ ಚಿನ್ನಾರಿಗಳು. ಅವರು ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು.
ಅಂದಹಾಗೆ ಆ ಶಾಲೆಯಿಂದ ಹೊರಬರುತ್ತಿರುವ ಮೂರನೇ ಪುಸ್ತಕ ಇದು. ಹೆಸರು `ಶಾಮಂತಿ- 3'. ಇದರಲ್ಲಿ ಆ ಮಕ್ಕಳು ಬರೆದಿರೋ 78 ಬರಹಗಳಿವೆ. ಶಾಲೆಯಲ್ಲಿ ನಡೆದ ಕಾರ್ಯಕ್ರಮಗಳನ್ನು ಸೇರಿಸಿ ಜ್ಞಾಪಕ ಶಾಲೆ ಹೆಸರಿನಲ್ಲಿ ಪ್ರಕಟಿಸಲಾಗಿದೆ. ಪುಸ್ತಕದ ಕುರಿತು ಮಕ್ಕಳ ಅಪ್ಪ ಅಮ್ಮಂದಿರು ದೊಡ್ಡವರು ಬರೆದಿರುವ ಅಭಿಪ್ರಾಯಗಳನ್ನೂ ಸಂಗ್ರಹಿಸಲಾಗಿದೆ. ಮಕ್ಕಳಿಂದ ಬರೆಸಿ ಅದನ್ನು ಚಿಣ್ಣರಿಗೆ ಇಷ್ಟವಾಗುವಂತೆ ಹೊರ ತಂದಿರುವುದು ಸಂಪಾದಕ ಎಸ್. ಕಲಾಧರ. ಮುಖಪುಟ, ಒಳಪುಟಗಳ ವಿನ್ಯಾಸವನ್ನು ಅವರೇ ಮಾಡಿದ್ದಾರೆ. ಇವರ ಕೆಲಸವನ್ನು ಪ್ರೋತ್ಸಾಹಿಸಿರೋದು ಕನ್ನಮಂಗಲದ ಸ್ನೇಹ ಕಲಾಸಂಘ.
ದೊಡ್ಡವರು ಬರೆವ ಮಕ್ಕಳ ಪುಸ್ತಕಕ್ಕಿಂತ ಇದು ಬೇರೆ ತರ. ಈ ಎಳೆಯರ ಜಗತ್ತು ಅದಕ್ಕಿಂತ ತಾಜಾ ತಾಜಾ. ದಿನವೂ ನೋಡುವ ಮನೆ, ಶಾಲೆ, ಮೈದಾನ, ತೋಟ, ಪ್ರಾಣಿ ಪಕ್ಷಿ ಮುಂತಾದವೆಲ್ಲಾ ಇಲ್ಲಿ ಬಣ್ಣ ತಳೆದಿವೆ. ಬರೆಯೋದು ಅಂದ್ರೆ ಬರೀ ಲೇಖನ ಅಲ್ಲ. ಅಲ್ಲಿ ಕತೆ, ಪದ್ಯ ಅಷ್ಟೇ ಏಕೆ, ನಾಟಕ ಕೂಡ ಇವೆ. ಕೆಲವು ಮಕ್ಕಳು ಒಳ್ಳೊಳ್ಳೆ ಚಿತ್ರ ಬರೆದಿದ್ದಾರೆ. ಅವರ ವಯಸ್ಸು ಅಬ್ಬಬ್ಬಾ ಅಂದ್ರೆ 9ರಿಂದ 13 ವರ್ಷ ಇರಬಹುದು ಅಷ್ಟೇ. ರಾಗಿಯಿಂದ ಹಿಡಿದು ಸಿನಿಮಾವರೆಗೆ ಏನೆಲ್ಲಾ ಉಂಟು ಗೊತ್ತಾ ಈ ಪ್ರಪಂಚದಲ್ಲಿ! ಎಂಟನೇ ತರಗತಿಯಲ್ಲಿ ಓದುತ್ತಿರುವ ಕೆ.ವಿ. ಶ್ರೀಧರ್ ಪದ್ಯ ಎಷ್ಟು ಚೆನ್ನಾಗಿದೆ ನೋಡಿ.
ಟಿಲ್ಲರ್ ಶಬ್ದ ಟಕಟಕ
ತುಂಬಾ ಭಾರ ಇರುತ್ತೆ ಅದು
ಅದರ ಊಟ ಪೆಟ್ರೋಲ್
ನೀರು ಸೀಮೆಎಣ್ಣೆ
ತುಂಬಾ ವಾಸನೆ ಅದರ ಹೊಗೆ
ಹುಚ್ಚನ ತರ ಆಡುತ್ತೆ ಅದು...
ತುಂಬಾ ಭಾರ ಇರುತ್ತೆ ಅದು
ಅದರ ಊಟ ಪೆಟ್ರೋಲ್
ನೀರು ಸೀಮೆಎಣ್ಣೆ
ತುಂಬಾ ವಾಸನೆ ಅದರ ಹೊಗೆ
ಹುಚ್ಚನ ತರ ಆಡುತ್ತೆ ಅದು...
ಡಿ.ಕೆ. ವಾಣಿಶ್ರೀ ಏಳನೇ ತರಗತಿ ಓದುತ್ತಿರುವ ಮಗು. ಕುಂಟಿ ಕಾಗೆ ಬಗ್ಗೆ ಬರೆಯುತ್ತಾ ಆಕೆ ಹೀಗೆ ಹೇಳುತ್ತಾಳೆ: ಪಾಪ ಅದಕ್ಕೆ ಕಾಲು ಕುಂಟಿ. ಅದನ್ನು ನಮ್ಮ ನಾಯಿ ಓಡಿಸಿಕೊಂಡು ಹೋಗುತ್ತಿತ್ತು. ನಾನು ಶಾಲೆಯಿಂದ ಮನೆಗೆ ಹೋಗಿ ಬ್ಯಾಗನ್ನು ಬಿಸಾಕಿ ಆ ಕಾಗೆಯನ್ನು ಕಾಪಾಡಿದೆ.
ಆರನೇ ತರಗತಿ ವಿದ್ಯಾರ್ಥಿ ಕೆ.ಎಸ್. ಧನುಷ್ ತಾನು ಕಂಡ ಇಂಟರ್ನ್ಯಾಷನಲ್ ಸ್ಕೂಲ್ ಅನ್ನು ವಿವರಿಸುವ ಪರಿ ಇದು: ಅಲ್ಲಿ ನೋಡಿದರೆ ಎಲ್ಲಾ ಸೈಲೆಂಟಾಗಿ ಇರುತ್ತಾರೆ. ಆ ಶಾಲೆಯಲ್ಲಿ ಚಿಕ್ಕವಯಸ್ಸಿಗೇ ಲ್ಯಾಪ್ಟಾಪ್ ಕೊಡುತ್ತಾರೆ ಗೊತ್ತೇ? ಅಲ್ಲಿ ಎಲ್ಲಾ ಇಂಗ್ಲಿಷ್ನಲ್ಲೇ ಮಾತಾಡೋದು. ಹಾಗೇ ಅಲ್ಲಿ ಎಲ್ಲಾ ಜಾಸ್ತಿ ರೇಟು.
ಅಂದಹಾಗೆ, ಇದಕ್ಕೆ ಮುನ್ನುಡಿ ಬರೆದಿರೋದು ಕೋಟಗಾನಹಳ್ಳಿ ರಾಮಯ್ಯ ಅಂಕಲ್ಲು. ಅವರು ಮಕ್ಕಳಿಗೋಸ್ಕರ ಸಾಕಷ್ಟು ಕೆಲಸ ಮಾಡಿದೋರು. ಬಹಳ ತಿಳಿದುಕೊಂಡೋರು. ಅವರು ಪುಸ್ತಕದ ಬಗ್ಗೆ ಬರೀತಾ, ಬರೀತಾ `ಇಲ್ಲೆಲ್ಲಾ ಬುದ್ಧ ಕಾರುಣ್ಯದ ಜಿನುಗು ಕಾಣಬಹುದು. ಈ ನೆಲದ ಅಂತಃಕರಣವನ್ನು ಯಾವ ಕೊಳೆಯಿಂದಲೂ ಹಿಂಗಿಸುವುದಕ್ಕೆ ಸಾಧ್ಯವಿಲ್ಲವೆಂಬ ನಂಬಿಕೆಗೆ ಇದೇ ಸಾಕ್ಷಿ. ಕೈವಾರ ತಾತಯ್ಯ ಹೇಳುವ ಕೆಂಡದೊಳಗೂ ಸಸಿ ಬೇರಿಳಿಸಿ ಬೆಳೆಯಬೇಕಣ್ಣ ಎನ್ನುವ ಸಸಿಯ ಬೇರುಗಳು ಇವು' ಅಂದಿದ್ದಾರೆ.
ಮಕ್ಕಳಿಗೆ ಕತೆ ಹೇಳುವ ಈ ಪುಸ್ತಕ ಮಕ್ಕಳನ್ನು ಕಡೆಗಣಿಸುವ ದೊಡ್ಡವರಿಗೆ ಒಳ್ಳೆಯ ಪಠ್ಯಪುಸ್ತಕ. `ನಾವು ಹೇಳಿದ್ದನ್ನೇ ಕೇಳಿಕೊಂಡು ಬಿದ್ದಿರಬೇಕೆಂಬ ಹುಂಬ ಹಟಗಳನ್ನು ಪಕ್ಕಕ್ಕಿಟ್ಟು ಕೇಳೋಣ. ಅವರ ಎದೆಯ ಕ್ಷೀಣ ಸ್ವರಗಳಿಗೆ ಅಭಯ ನೀಡೋಣ. ನಾನು ನಿನ್ನ ಭಾವನೆಗಳನ್ನು ಹಂಚಿಕೊಳ್ಳುತ್ತೇನೆ ಎನ್ನೋಣ. ಹಾಗೆನ್ನುವುದು ಮಕ್ಕಳಲ್ಲಿ ಅಶಿಸ್ತು ಮೂಡಿಸುತ್ತದೆ ಎಂದು ನಿಮಗನ್ನಿಸಿದರೆ ಅದು ನಿಮ್ಮ ಅಜ್ಞಾನವೆನ್ನದೆ ಗತ್ಯಂತರವಿಲ್ಲ' ಎಂದು ಮೈ ಮೆರೆತ ದೊಡ್ಡವರಿಗೆ ಸವಾಲೆಸೆಯುತ್ತದೆ ಪುಸ್ತಕ.
ಇದೇ ಶಾಲೆಯಿಂದ ಮುಂದೊಂದು ದಿನ ಕಲಾವಿದೆಯರು, ಕತೆಗಾರರು, ಕವಿಗಳು, ನಟರು, ನಾಟಕಕಾರರು ಹುಟ್ಟಿದರೆ ಅವರೆಲ್ಲಾ ಖಂಡಿತಾ `ಶಾಮಂತಿ'ಯನ್ನೂ, ಅಲ್ಲಿನ ಮೇಷ್ಟ್ರುಗಳನ್ನೂ ನೆನೆಯದೇ ಇರುವುದಿಲ್ಲ.
ಮಕ್ಕಳೇ ಇಂಥದ್ದೊಂದು ಪುಸ್ತಕ ನಿಮ್ಮ ಮನೆಯಲ್ಲೂ ಇರಲಿ. ಅದು ನಿಮಗೆ ಒಳ್ಳೆಯ ಫ್ರೆಂಡ್ ಆಗುತ್ತೆ. ನೀವೂ ಓದಿ, ನಿಮ್ಮ ಅಪ್ಪ ಅಮ್ಮಂದಿರಿಗೂ ಓದಿಸಿ. ಪುಸ್ತಕಕ್ಕಾಗಿ ಈ ನಂಬರ್ಗೆ ಫೋನ್ ಮಾಡಬಹುದು: 9900695142 ಅಥವಾkaladhars152@gmail.com ಗೆ ಮೇಲ್ ಮಾಡಬಹುದು.
Friday, 22 November 2013
ವಿಭಾಗಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ
ಗುಂಬಳ್ಳಿ ಪ್ರಥಮ ; ಹೆಗ್ಗಡಹಳ್ಳಿ ದ್ವಿತೀಯ
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ನಾಟಕ ಸ್ಪರ್ಧೆ ದಿನಾಂಕ 21-11-2013 ರ ಗುರುವಾರ ಮೈಸೂರಿನ ವಸಂತ ಮಹಲ್ ನಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆವರಣದಲ್ಲಿ ನಡೆಯಿತು.
ವೇಷಧಾರಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮೈಸೂರು ಜಿಲ್ಲಾ ಪಂಚಾಯ್ತಿಯ ಮುಖ್ಯ ಲೆಕ್ಕಾಧಿಕಾರಿಗಳಾದ ಶ್ರೀ ಸಿದ್ಧರಾಜು ಅವರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಮತಿ ಜೋಲಾ ಜಬಿನ್ ಅವರು , ಶ್ರೀಮತಿ ಮಂಜುಳ ಅವರು ಹಾಗೂ ಡಯಟ್ ಪ್ರಾಂಶುಪಾಲರಾದ ಶ್ರೀ ಬಿ. ಕೆ. ಬಸವರಾಜು ಅವರುಗಳು ಒಂದೊಂದು ವಾದ್ಯಗಳನ್ನು ನುಡಿಸುವ ಮೂಲಕ ಮಕ್ಕಳ ಈ ನಾಟಕೋತ್ಸವಕ್ಕೆ ಚಾಲನೆ ನೀಡಿದರು. ಸ|| ಪ್ರೌ|| ಶಾಲೆ ಹೆಗ್ಗಡಹಳ್ಳಿಯ ನಾಟಕ ಮೇಸ್ಟ್ರಾದ ಸಂತೋಷ ಗುಡ್ಡಿಯಂಗಡಿ ರಂಗಗೀತೆ ಹಾಡಿದರೆ ಹೆಗ್ಗಡಹಳ್ಳಿಯ ವಿದ್ಯಾರ್ಥಿಗಳು ವೈಜ್ಷಾನಿಕ ಮನೋಭಾವ ಬೀರುವ ಹಾಡೊಂದನ್ನು ವಾದ್ಯಮೇಳದೊಂದಿಗೆ ಪ್ರಸ್ತುತಪಡಿಸಿ ಕಾರ್ಯಕ್ರಮದ ಆರಂಭಕ್ಕೆ ಮೆರುಗು ನೀಡಿದರು.
ಶ್ರೀ ಸಿದ್ಧರಾಜು ಅವರು ಮಾತನಾಡುತ್ತಾ ಒಂದೊಂದು ಮಗುವೂ ಅದ್ಭುತ. ಒಂದು ಮಗುವಿನ ಹಾಗೆ ಇನ್ನೊಂದು ಮಗುವಿರುವುದಿಲ್ಲ. ನಿಮ್ಮ ಹಾಗೆ ಇನ್ನೊಬ್ಬರು ಈ ಜಗತ್ತಿನಲ್ಲಿ ಸಿಗಲಾರರು. ಅಂದಮೇಲೆ ನೀವು ಜಗತ್ತಿನ ಅದ್ಭುತವಲ್ಲವೇ? ಮಕ್ಕಳಲ್ಲಿ ಚಿಕ್ಕಂದಿನಿಂದಲೇ ವೈಚಾರಿಕ ಮನೋಭಾವವನ್ನು ಬಿತ್ತಿದರೆ ಮೂಢನಂಬಿಕೆಯ ಕುರಿತಾಗಿ ಕಾನೂನು ತರುವ ಅಗತ್ಯವೇ ಬೀಳುವುದಿಲ್ಲ ಎಂದರು. ಹೆಗ್ಗಡಹಳ್ಳಿಯ ನಾಟಕ ಶಿಕ್ಷಕರ ಬಗ್ಗೆ ಪತ್ರಿಕೆಯಲ್ಲಿ ಬಂದಿರುವ ವರದಿಯನ್ನು ನೆನಪು ಮಾಡಿಕೊಳ್ಳುತ್ತಾ ಮಾತಿಗೆ ತೊಡಗಿದ ಸಿದ್ಧರಾಜು ಅವರು ಈ ಜಗತ್ತಿನ ಮೊದಲ ವೈಚಾರಿಕ ನಾಟಕದಿಂದ ಹಿಡಿದು ವಿಜ್ಞಾನ ನಮಗೆ ಹೇಗೆ ಅವಶ್ಯಕ, ನಾವ್ಯಾಕೆ ವೈಚಾರಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಿದರು.
ಶ್ರೀಮತಿ ಜೋಲಾ ಜಬಿನ್ ಅವರು ಮಾತನಾಡುತ್ತಾ ಭಾಗವಹಿಸುವುದು ಶ್ರೇಷ್ಠ, ಬಹುಮಾನ ಪಡೆಯುವುದೂ ಶ್ರೇಷ್ಠ. ಆದರೆ ಮಕ್ಕಳೇ ನೀವೆಲ್ಲರೂ ಗೆದ್ದಿರುವವರು ನಿಮಗೆಲ್ಲಾ ಶುಭವಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಯಟ್ ಪ್ರಾಂಶುಪಾಲರಾದ ಶ್ರೀ ಬಿ. ಕೆ. ಬಸವರಾಜು ಮಾತನಾಡಿ : ತರಗತಿಯಲ್ಲಿ ನಾಟಕಗಳಾಗಬೇಕು. ಶಿಕ್ಷಕರು ತರಬೇತಿಯ ಸಮಯದಲ್ಲಿ ರಂಗಕಲೆಯ ಮೂಲಕ ಪಾಠ ಮಾಡುವುದನ್ನು ಕಲಿಯುತ್ತಾರೆ ಆದರೆ ಶಿಕ್ಷಕರಾದ ಮೇಲೆ ಬರಿಯ ಪಾಠವನ್ನಷ್ಟೇ ಮಾಡುತ್ತಾರೆ. ಶಾಲೆಗಳು ಸಾಂಸ್ಕೃತಿಕ ಕೇಂದ್ರಗಳಾಗಬೇಕು. ಸಮಾಜಕ್ಕೆ ಪ್ರೇರಣೆಯನ್ನು ನೀಡಬಲ್ಲಂತ ತಿಳುವಳಿಕೆಯ ತಾಣಗಳಾಗಬೇಕು ಎಂದರು. ನಮ್ಮ ಶಾಲೆಯ "ಅಳ್ಳೀಮರ"ವನ್ನು ಸಭೆಗೆ ತೋರಿಸಿ ಪ್ರತಿಯೊಂದು ಶಾಲೆಯೂ ಮಕ್ಕಳ ಮನೋವಿಕಾಸವನ್ನು ಮಾಡಬಲ್ಲಂತ ಇಂತಹ ಪತ್ರಿಕೆಗಳನ್ನು ತರುವಂತಾಗಲಿ. ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ "ಅಳ್ಳೀಮರ" ಪತ್ರಿಕೆ ಬಹಳ ಒಳ್ಳೆಯ ಕೆಲಸ ಎಂದರು.
ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ ಮತ್ತು ರಾಮನಗರ ಜಿಲ್ಲೆಯಿಂದ ಆಯ್ಕೆಗೊಂಡಿರುವಂತಹ ಐದು ಪ್ರೌಢ ಶಾಲೆಗಳ ನಾಟಕ ತಂಡಗಳು ಸ್ಪರ್ದೆಯಲ್ಲಿ ಭಾಗವಹಸಿದ್ದವು.
ಪ್ರಥಮ ಬಹುಮಾನ : ಸ|| ಪ್ರೌ|| ಶಾಲೆ ಗುಂಬಳ್ಳಿ
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಗುಂಬಳ್ಳಿ ಮಕ್ಕಳು ಶಾಲೆಯ ನಾಟಕ ಶಿಕ್ಷಕ ಮಧುಕರ ಮಳವಳ್ಳಿ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದ ನಾಟಕ "ನೀರಿಗಾಗಿ ಸಹಕಾರ" ನಾಟಕ ಪ್ರಥಮ ಪ್ರಶಸ್ತಿ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು. ನಾಟಕದ ನಿರ್ದೇಶನಕ್ಕಾಗಿ ಮಧುಕರ ಮಳವಳ್ಳಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಪಡೆದುಕೊಂಡರು.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಹೆಗ್ಗಡಹಳ್ಳಿಯ ಮಕ್ಕಳು ಪ್ರಸ್ತುತಪಡಿಸಿದ ನಾಟಕ "ಪ್ಲಾಸ್ಟಿಕ್ ಭೂತ" ದ್ವಿತೀಯ ಬಹುಮಾನ ಪಡೆಯಿತು. ಶಾಲೆಯ ರೋಹಿತ್ ಕುಮಾರ್ ಅತ್ಯುತ್ತಮ ನಟ ಮತ್ತು ಶಾಲೆಯ ನಾಟಕ ಮೇಸ್ಟ್ರು ಸಂತೋಷ ಗುಡ್ಡಿಯಂಗಡಿ ಅತ್ಯುತ್ತಮ ನಾಟಕ ರಚನೆ ಬಹುಮಾನ ಪಡೆದುಕೊಂಡರು.
ದ್ವಿತೀಯ ಬಹುಮಾನ : ಸ|| ಪ್ರೌ|| ಶಾಲೆ ಹೆಗ್ಗಡಹಳ್ಳಿ
ರೋಹಿತ್ ಕುಮಾರ್ ಎಚ್. ಎಂ. : ಅತ್ಯುತ್ತಮ ನಟ
ಮಂಡ್ಯ ಜಿಲ್ಲೆ ಮಾಂಡವ್ಯ ಇಂಗ್ಲಿಶ್ ಮಾಧ್ಯಮ ಶಾಲೆ ನೆಹರೂ ನಗರ ಮಂಡ್ಯ ಇಲ್ಲಿನ ಮಕ್ಕಳು "ಪವಾಡ" ನಾಟಕ ಪ್ರಸ್ತುತಪಡಿಸಿ ಮೂರನೇ ಬಹುಮಾನ ಪಡೆದುಕೊಂಡರು. ಶಾಲೆಯ ಶಿಕ್ಷಕಿ ಸ್ಮಿತಾ ನಾಟಕವನ್ನು ರಚಿಸಿದ್ದರು.
ಕೊಡಗು ಜಿಲ್ಲೆಯ ಕುಶಾಲನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಚರಿತ ತನ್ನ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಳು
ಕುಮಾರಿ ಚರಿತ ಕುಶಾಲನಗರ : ಅತ್ಯುತ್ತಮ ನಟಿ
ನಮ್ಮ ಶಾಲೆಗೊಂದು ಗೌರವ....
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮೈಸೂರು ಇವರು ಆಯೋಜಿಸಿದ್ದ ವಿಭಾಗಮಟ್ಟದ ನಾಟಕ ಸ್ಪರ್ಧೆಯಲ್ಲಿ ನೀಡಿದ ಪ್ರಶಸ್ತಿ ಪತ್ರಕ್ಕೆ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳ ನಾಟಕ ಪ್ಲಾಸ್ಟಿಕ್ ಭೂತ ನಾಟಕದ ಫೋಟೋಗಳನ್ನು ಮುದ್ರಿಸಿ ನಮ್ಮ ಶಾಲೆಗೊಂದು ವಿಶೇಷವಾದ ಗೌರವವನ್ನು ನೀಡಿದೆ. ಎಲ್ಲಾ ಜಿಲ್ಲೆಯ ಮಕ್ಕಳು ತಮ್ಮೊಡನೆ ಮನೆಗೊಯ್ದ ಪ್ರಶಸ್ತಿಯೊಂದಿಗೆ ನಮ್ಮ ಮಕ್ಕಳ ನೆನಪುಗಳನ್ನು ತೆಗೆದುಕೊಂಡು ಹೋಗುವಂತೆ ಮಾಡಿದ ಡಯಟ್ ಮೈಸೂರು ಇದರ ಪ್ರಾಂಶುಪಾಲರಾದ ಶ್ರೀ ಬಿ.ಕೆ.ಬಸವರಾಜು ಸರ್, ಮಂಜುಳ ಮೇಡಂ ಹಾಗೂ ಇಡೀ ಕಾರ್ಯಕ್ರಮ ಆಯೋಜನೆಯಲ್ಲಿ ತೊಡಗಿಸಿಕೊಂಡು ಉತ್ತಮವಾಗಿ ಕಾರ್ಯಕ್ರಮ ನಡೆಸಿಕೊಟ್ಟ ಪುಷ್ಪಲತಾ ಮೇಡಂ ಹಾಗೂ ಮಮತ ಮೇಡಂ ಅವರಿಗೆ ನಾನು ಮತ್ತು ನಮ್ಮ ಶಾಲೆಯ ಕಲಾವಿದ ವಿದ್ಯಾರ್ಥಿಗಳು ಋಣಿಯಾಗಿದ್ದೇವೆ.
-ಸಂತೋಷ ಗುಡ್ಡಿಯಂಗಡಿ
ರೋಹಿತ್ ಕುಮಾರ್ ಎಚ್. ಎಂ., ಅಮೃತ ಎಚ್. ಎಸ್., ಆಶಾ ಎಚ್. ಎಚ್., ಸಂಜನಾ ಎಚ್. ಆರ್., ಮಮತ ಎಚ್. ಎನ್., ಸಂದೇಶ ಎಚ್. ಎಂ., ರಾಕೇಶ ವಿ., ಮಹದೇವ ಸ್ವಾಮಿ ಎಚ್. ಎನ್., ಮನುಕುಮಾರ್
ಪ್ರಜಾವಾಣಿಯ ಬೆಂಗಳೂರು ಆವೃತ್ತಿಯ ಮೇಟ್ರೋ ಪುರವಣಿಯ ಇಂದಿನ (22-11-2013) ಸಂಚಿಕೆಯಲ್ಲಿ ನಮ್ಮ ಅಳ್ಳೀಮರ ಬ್ಲಾಗಿನ ಕುರಿತೊಂದು ಚಂದದ ಬರಹ ಪ್ರಕಟವಾಗಿತ್ತು.
ಧನ್ಯವಾದಗಳು ಪ್ರಜಾವಾಣಿ
ಬ್ಲಾಗಿಲನು ತೆರೆದು...
ಹಳ್ಳಿಗೊಂದು ಬೇಕು ‘ಅಳ್ಳೀಮರ’
ಮಕ್ಕಳ ಪತ್ರಿಕೆಯ ಮುಂದುವರಿದ ಭಾಗದಂತೆ ಬ್ಲಾಗ್ ರೂಪುಗೊಂಡಿದೆ. ಈ ಬ್ಲಾಗಿನಲ್ಲಿ ಹೆಗ್ಗಡನಹಳ್ಳಿ ಶಾಲೆಯ ಮಕ್ಕಳ ವಿವಿಧ ಚಟುವಟಿಕೆಗಳ ವಿವರಗಳಿವೆ. ಭಾರತ ಚುನಾವಣಾ ಆಯೋಗ ಏರ್ಪಡಿಸಿದ್ದ ಜಿಲ್ಲಾಮಟ್ಟದ ಹೆಣ್ಣುಮಕ್ಕಳ ನಾಟಕ ಸ್ಪರ್ಧೆಯಲ್ಲಿ ಶಾಲೆಯ ಹುಡುಗಿಯರು ಫಸ್ಟ್ ಪ್ರೈಜ್ ಗೆದ್ದ ಬಗ್ಗೆ ವಿವರಗಳೂ ಚಿತ್ರಗಳೂ ಇವೆ.
ಅರಳೀಮರದ ಕೆಳಗೆ ಹುಲ್ಲುಕಡ್ಡಿಯೂ ಬೆಳೆಯೋದಿಲ್ಲ ಎನ್ನುವ ಮಾತಿದೆ. ಆದರೆ, ಈ ಅರಳೀಮರದ ಕೆಳಗೆ ಮಕ್ಕಳು ಆಡಿಕೊಳ್ಳುತ್ತಿದ್ದಾರೆ. ಮರದ ನೆರಳಿನಲ್ಲಿ ಚಿಣ್ಣರ ನಾಳೆಗಳು ಅರಳುತ್ತಿವೆ. ಅಂದಹಾಗೆ, ಇದು ಮಕ್ಕಳ ಮಾತಿನಲ್ಲಿ ‘ಅಳ್ಳೀಮರ’. ಇದು ಬ್ಲಾಗಿನ ಹೆಸರೂ (allimara.blogspot.in) ಹೌದು.
‘ಅಳ್ಳೀಮರ’– ಮಯ್ಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳ ಆಟದ ಮೈದಾನದಂತಿದೆ. ಅಂದಹಾಗೆ, ‘ಅಳ್ಳೀಮರ’ ಹೆಸರಿನ ತಿಂಗಳ ಪತ್ರಿಕೆಯೊಂದು ಈ ಶಾಲೆಯಿಂದ ಪ್ರಕಟಗೊಳ್ಳುತ್ತಿದೆ. ನಾಟ್ಕದ ಮೇಷ್ಟ್ರು ಸಂತೋಷ್ ಗುಡ್ಡಿಯಂಗಡಿ ಈ ಪತ್ರಿಕೆಯನ್ನು ರೂಪಿಸುತ್ತಿದ್ದಾರೆ. ಶಾಲಾ ಮಕ್ಕಳ ಕನಸು ಕನವರಿಕೆಗಳು ಗದ್ಯ, ಪದ್ಯ, ಚಿತ್ರಗಳ ರೂಪದಲ್ಲಿ ಈ ಅಳ್ಳೀಮರದ ಪುಟಗಳಲ್ಲಿ ಉತ್ಸಾಹದಿಂದ ಪುಟಿಯುತ್ತಿರುತ್ತವೆ. ಸಹೃದಯರ ಬಳಗವೊಂದಕ್ಕೆ ಸಂತೋಷ್ ಪ್ರತಿ ತಿಂಗಳು ನಿಷ್ಠೆಯಿಂದ ಪತ್ರಿಕೆ ತಲುಪಿಸುತ್ತಿದ್ದಾರೆ. ಈ ಪತ್ರಿಕೆಯ ಕೆಲವು ಪಿಡಿಎಫ್ ಪುಟಗಳನ್ನೂ ಬ್ಲಾಗಿನಲ್ಲಿ ಕಾಣಬಹುದು.
ಮಕ್ಕಳ ಪತ್ರಿಕೆಯ ಮುಂದುವರಿದ ಭಾಗದಂತೆ ಬ್ಲಾಗ್ ರೂಪುಗೊಂಡಿದೆ. ಈ ಬ್ಲಾಗಿನಲ್ಲಿ ಹೆಗ್ಗಡನಹಳ್ಳಿ ಶಾಲೆಯ ಮಕ್ಕಳ ವಿವಿಧ ಚಟುವಟಿಕೆಗಳ ವಿವರಗಳಿವೆ. ಭಾರತ ಚುನಾವಣಾ ಆಯೋಗ ಏರ್ಪಡಿಸಿದ್ದ ಜಿಲ್ಲಾಮಟ್ಟದ ಹೆಣ್ಣುಮಕ್ಕಳ ನಾಟಕ ಸ್ಪರ್ಧೆಯಲ್ಲಿ ಶಾಲೆಯ ಹುಡುಗಿಯರು ಫಸ್ಟ್ ಪ್ರೈಜ್ ಗೆದ್ದ ಬಗ್ಗೆ ವಿವರಗಳೂ ಚಿತ್ರಗಳೂ ಇವೆ. ‘ಝಣ ಝಣ ಚುನಾವಣೆ’ ಎನ್ನುವ ಈ ನಾಟಕದ ರಚನೆ ಮತ್ತು ನಿರ್ದೇಶನ ಸಂತೋಷ್ ಗುಡ್ಡಿಯಂಗಡಿ ಅವರದು.
ಶಾಲೆಯ ಚೌಕಟ್ಟಿನ ನಡುವೆ ಮಾತ್ರವಲ್ಲದೆ, ಪರಿಸರದ ನಡುವೆಯೂ ಮಕ್ಕಳು ಪಾಠ ಕಲಿಯುತ್ತಿರುವ, ವಿವಿಧ ಚಟುವಟಿಕೆಗಳಲ್ಲಿ ತೊಡಗಿರುವ ಛಾಯಾಚಿತ್ರಗಳು ಬ್ಲಾಗ್ನಲ್ಲಿವೆ. ಗ್ರಾಮ್ಯ ಸೊಗಡು ಬ್ಲಾಗ್ನ ಬರಹ–ಚಿತ್ರಗಳಲ್ಲಿ ಎದ್ದುಕಾಣುವಂತಿದೆ.
ಮಕ್ಕಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾದ ಕೆಲವು ಲೇಖನಗಳೂ ಬ್ಲಾಗಿನಲ್ಲಿವೆ. ಕವಯಿತ್ರಿ ರೂಪ ಹಾಸನ ಅವರ ‘ಆತಂಕದಲ್ಲಿ ತಲ್ಲಣಿಸುತ್ತಿದೆ ಹೆಣ್ಣುಜೀವ’ ಬರಹದ ಒಂದು ತುಣುಕು ನೋಡಿ:
‘‘ಹಳ್ಳಿಯ ಬಡ ಕುಟುಂಬವೊಂದರ ೧೧ ವರ್ಷಗಳ ಎಳೆಬಾಲೆ ಅವಳು. ಋತುಮತಿಯಾಗಿ ಆರು ತಿಂಗಳೂ ಕಳೆದಿಲ್ಲ. ಲೈಂಗಿಕತೆ ಎಂದರೇನೆಂದು ಇರಲಿ, ಪ್ರೀತಿ-ಪ್ರೇಮವೆಂದರೆ ಏನೆಂದೂ ಅರಿಯದ ಮುಗ್ಧಳು. ಶಾಲೆಗೆ ಬಿಡಲು ಕರೆದುಕೊಂಡು ಹೋದ ಸಂಬಂಧಿಯಿಂದಲೇ ಕಳೆದ ವಾರವಷ್ಟೇ ಅವಳ ಅತ್ಯಾಚಾರವಾಗಿದೆ. ಮೈಮನಸುಗಳೆರಡೂ ಜರ್ಜರಿತವಾಗಿ ನಡುಗುತ್ತಿರುವ ಆ ಕಂದಮ್ಮ ಇದನ್ನು, ಅವನು ಕೊಟ್ಟ ಶಿಕ್ಷೆ ಎಂದೇ ಭಾವಿಸಿದ್ದಾಳೆ. ನಾನೇನೂ ತಪ್ಪು ಮಾಡಿಲ್ಲದಿದ್ದರೂ, ಮಾಮ ನನಗೆ ಈ ಶಿಕ್ಷೆ ಯಾಕೆ ಕೊಟ್ಟರು? ಎಂಬ ಪ್ರಶ್ನೆಗೆ ಏನು ಉತ್ತರಿಸುವುದೆಂಬ ಅರಿವಿಲ್ಲದೇ ಕಂಗಳು ತುಂಬುತ್ತವೆ. ಆ ವ್ಯಕ್ತಿಗೆ ರಾಜಕೀಯ ಪ್ರಮುಖರ ನಿಕಟ ಸಂಪರ್ಕವಿರುವುದರಿಂದ ಕೇಸು ದಾಖಲು ಮಾಡಿಕೊಳ್ಳಲೇ ಪೊಲೀಸರು ಹಿಂದೆಗೆದಿರುವುದರಿಂದ ಮಗುವನ್ನು ಒಳಗೊಂಡು ಕುಟುಂಬದವರು ಇನ್ನೂ ಆತಂಕದಿಂದ ತಲ್ಲಣಿಸುತ್ತಿದ್ದಾರೆ. ಈಗ ಆ ಮಗು ಅನುಭವಿಸಿದ ವಿನಾ ಕಾರಣದ ಮಾನಭಂಗದ ಶಿಕ್ಷೆಗೆ ನ್ಯಾಯ ಯಾರು ಕೊಡುತ್ತಾರೆ?’’.
ರೂಪ ಅವರ ಬರಹದಲ್ಲಿ ವರ್ತಮಾನದ ಕ್ರೌರ್ಯದ ಘಟನೆಗಳ ವಿವರಗಳಿವೆ. ಇಂಥ ತಲ್ಲಣಗಳ ನಡುವೆಯೂ ಒಳ್ಳೆಯತನದ ಬಗ್ಗೆ ನಂಬಿಕೆ ಉಳಿಸುವ ವಿಷಯಗಳೂ ಸಮಾಜದಲ್ಲಿ ಇವೆಯಷ್ಟೇ. ಅಂಥ, ಒಳ್ಳೆಯತನ, ಜಾಕನಪಲ್ಲಿ ಮೇಷ್ಟ್ರು ಅಶೋಕ ತೊಟ್ನಳ್ಳಿ ಅವರ ಕುರಿತ ಬರಹ ಬಿಂಬಿಸುತ್ತದೆ. ಈ ಲೇಖನದ ಒಂದು ಭಾಗ– ‘‘ಜನವರಿ ತಿಂಗಳ ಎರಡನೇ ವಾರದಂದು ಗುಲ್ಬರ್ಗಾದಿಂದ ಪ್ರಕಟಗೊಳ್ಳುವ ಎಲ್ಲಾ ಸಣ್ಣ ದೊಡ್ಡ ಪತ್ರಿಕೆಗಳು ಜಾಕನಪಲ್ಲಿಯನ್ನು ಹಾಡಿ ಹೊಗಳಿದವು. ಇದಕ್ಕೆ ಕಾರಣ ಈ ಪುಟ್ಟ ಊರಿನ ಪ್ರೌಢಶಾಲಾ ಮಕ್ಕಳು. ಈ ಬಾರಿಯ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯ ನಾಟಕ ಸ್ಪರ್ಧೆಯಲ್ಲಿ ಈ ಮಕ್ಕಳು ಪ್ರಥಮ ಸ್ಥಾನ ಗಳಿಸಿ, ಆತಿಥೇಯ ಗುಲ್ಬರ್ಗ ಜಿಲ್ಲೆಗೆ ಏಕೈಕ ಪ್ರಥಮ ಬಹುಮಾನದ ಕಾಣಿಕೆ ನೀಡಿದ್ದರು. ಈ ಮಕ್ಕಳ ಪ್ರತಿಭೆಯ ಹಿಂದೊಂದು ಸ್ಫೂರ್ತಿಯ ಚಿಲುಮೆಯಿದೆ. ಅದು ಜಾಕನಪಲ್ಲಿ ಪ್ರೌಢಶಾಲೆಯ ನಾಟಕದ ಮೇಸ್ಟ್ರು ಅಶೋಕ ತೊಟ್ನಳ್ಳಿ’’. ಇಂಥ ಮೇಷ್ಟ್ರುಗಳೇ ಸಮಾಜದ ನಾಳೆಗಳ ಬಗ್ಗೆ ನಿರೀಕ್ಷೆ ಉಳಿಸುತ್ತಾರೆ.
‘ಅಳ್ಳೀಮರ’ ಅನೇಕ ಸಹೃದಯರಿಗೆ ಮೆಚ್ಚುಗೆಯಾಗಿದೆ. ಹಿರಿಯ ಕವಿ ಚೆನ್ನವೀರ ಕಣವಿ– ‘‘ಹೆಗ್ಗಡಹಳ್ಳಿ ಮಕ್ಕಳ ಶಾಲೆಯ ಪತ್ರಿಕೆ ನೋಡಿ ಸಂತೋಷವಾಯಿತು. ಗದ್ಯ–ಪದ್ಯ–ಚಿತ್ರ ಎಲ್ಲದರಲ್ಲಿಯೂ ಈ ಶಾಲೆಯ ಮಕ್ಕಳು ಸಹಜವಾಗಿ, ಸರಳವಾಗಿ ಮುಗ್ಧತೆಯಿಂದ ಬರವಣಿಗೆ ನಡೆಸಿರುವುದು ಹಾಗೂ ಅದಕ್ಕೆ ತಾವು ಪ್ರೋತ್ಸಾಹ ನೀಡುತ್ತಿರುವುದೂ ತುಂಬಾ ಮೆಚ್ಚುಗೆಯನ್ನುಂಟುಮಾಡಿತು. ಹಾಗೆಯೇ ‘ನಮ್ಮ ಅತಿಥಿ’ ಅಂಕಣದಲ್ಲಿ ಸ. ರಘುನಾಥ ಮೇಷ್ಟ್ರು ಬಗ್ಗೆ ಬರೆದು ಮಕ್ಕಳಿಗೆ ಪ್ರೇರಣೆ ನೀಡಿರುವುದು ಔಚಿತ್ಯಪೂರ್ಣವಾಗಿದೆ’’ ಎಂದು ಬರೆದಿರುವ ಪತ್ರವೂ ಬ್ಲಾಗ್ನಲ್ಲಿದೆ.
ಇಂಥ ‘ಅಳ್ಳೀಮರ’ಗಳು ಹಳ್ಳಿಗೊಂದಾದರೂ ಬೇಕಲ್ಲವೇ?
Subscribe to:
Posts (Atom)