Saturday 5 September 2015

ಜಿಲ್ಲಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ - 2015

ದಿನಾಂಕ 04-09-2015ರ ಶುಕ್ರವಾರ ಮೈಸೂರು ಡಯಟ್ ನ ನೃಪತುಂಗ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮೈಸೂರು ಜಿಲ್ಲಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ನಡೆಯಿತು. ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಡಯಟ್ ಪ್ರಾಂಶುಪಾಲರಾದ ಶ್ರೀ ರಘುನಂದನ್ ಅವರು ಮಾತನಾಡುತ್ತಾ..'ಪ್ರತಿಯೊಬ್ಬ ವ್ಯಕ್ತಿ ಮುಸುಕಿನೊಳಗೆ ಬದುಕುತ್ತಿರುತ್ತಾನೆ. ಮುಖವಾಡ ಧರಿಸಿಕೊಂಡು ಬದುಕುತ್ತಿದ್ದೇವೆ ನಾವೆಲ್ಲ. ನಾಟಕ ಬಿಟ್ಟು ಯಾರೂ ಬದುಕುತ್ತಿಲ್ಲ. ನಮಗೆ ಗೊತ್ತಿಲ್ಲದೆ ಅಭಿನಯಿಸುತ್ತೇವೆ. ಗೊತ್ತಿಲ್ಲದೆ ಪಾತ್ರ ಧರಿಸುತ್ತೇವೆ, ವೇಷಭೂಷಣ ಬದಲಾಯಿಸುತ್ತಿರುತ್ತೇವೆ. ಪ್ರತೀ ಸಂದರ್ಭದಲ್ಲಿಯೂ ವೇಷ ಹಾಕಿಕೊಳ್ಳುತ್ತೇವೆ. ಮಾತಿನಲ್ಲಿ ಬದಲಾವಣೆ ಮಾಡುತ್ತಿರುತ್ತೇವೆ, ನಾವಾಡುವ ನಾಟಕವನ್ನು ನಾವೇ ನಿರ್ದೇಶಿಸುತ್ತೇವೆ ಇಲ್ಲ ಸಮಾಜ ಅದನ್ನು ನಿರ್ದೇಶಿಸುತ್ತದೆ.
ಭಾಷಾ ಶುದ್ಧತೆಗೆ, ಭಾಷಾ ಪ್ರೌವೀಣತೆಗೆ ರಂಗಭೂಮಿಗಿಂತ ಮೀರಿದ ಇನ್ನೊಂದು ಮಾಧ್ಯಮವಿಲ್ಲ' ಎಂದರು.



 ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವ ಡಯಟ್ ಪ್ರಾಂಶುಪಾಲರಾದ ಶ್ರೀ ರಘುನಂದನ್

ಈ ನಾಟಕೋತ್ಸವದಲ್ಲಿ ಜಿಲ್ಲೆಯ ಒಂಬತ್ತು ತಾಲೂಕುಗಳಿಂದ ಬಂದ ತಂಡಗಳ ಮಕ್ಕಳು ಪ್ರದರ್ಶನ ನೀಡಿದರು. ಅವುಗಳಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು ನಮ್ಮ ಶಾಲೆಯ ಮಕ್ಕಳು ಅಭಿನಯಿಸಿದ "ಭೂಮಿಗೆ ಜ್ವರ ಬಂದಿದೆ" ನಾಟಕ. ನಾಗೇಶ ಹೆಗಡೆಯವರ ಪುಸ್ತಕ 'ಕೊಪೆನ್ ಹೇಗನ್ ಋತುಸಂಹಾರ " ಕೃತಿಯನ್ನು ಆಧರಿಸಿ ನಾಟಕ ರಚಿಸಿ ನಿರ್ದೇಶಿಸಿದ್ದು ಸಂತೋಷ ಗುಡ್ಡಿಯಂಗಡಿ. ಪ್ರಥಮ ಬಹುಮಾನವಲ್ಲದೆ ಭೂಮಿತಾಯಿ ಪಾತ್ರ ಮಾಡಿದ ಸೌಂದರ್ಯ ಎಂ. ವಿ.ಗೆ ಉತ್ತಮ ನಟಿ,  ನಾಗೇಶ ಹೆಗಡೆಯವರಿಗೆ ಉತ್ತಮ ನಾಟಕ, ಸಂತೋಷ ಗುಡ್ಡಿಯಂಗಡಿಗೆ ಉತ್ತಮ ನಿರ್ದೇಶನ ಬಹುಮಾನಗಳು ಬಂದವು. ಎರಡನೇ ಬಹುಮಾನವನ್ನು ಸರ್ಕಾರಿ ಪ್ರೌಢ ಶಾಲೆ, ಕಿತ್ತೂರು ಪಿರಿಯಾಪಟ್ಟಣ ಶಾಲೆಯ ಮಕ್ಕಳು ಪಡೆದುಕೊಂಡರು. ಮೂರನೇ ಬಹುಮಾನವನ್ನು ಮಯ್ಸೂರಿನ ಮಹಾರಾಜ ಬಾಲಕರ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಪಡೆದುಕೊಂಡರು.


 ಭೂಮಿಗೆ ಜ್ವರ ಬಂದಿದೆ ನಾಟಕದ ದೃಶ್ಯ

  ಭೂಮಿಗೆ ಜ್ವರ ಬಂದಿದೆ ನಾಟಕದ ದೃಶ್ಯ

 ಭೂಮಿಗೆ ಜ್ವರ ಬಂದಿದೆ ನಾಟಕದ ದೃಶ್ಯ


ಪ್ರಥಮ ಬಹುಮಾನ ಸ್ವೀಕರಿಸುತ್ತಿರುವ ಹೆಗ್ಗಡಹಳ್ಳಿ ಶಾಲೆಯ ಮಕ್ಕಳು

ಉತ್ತಮ ನಟಿ ಬಹುಮಾನ ಸ್ವೀಕರಿಸುತ್ತಿರುವ ಸೌಂದರ್ಯ ಎಂ. ವಿ.

ಪ್ರಥಮ(ಕೆಳಗಿನ ಸಾಲು), ದ್ವಿತೀಯ(ಮಧ್ಯ), ತೃತೀಯ(ಮೇಲಿನ ಸಾಲು) ಬಹುಮಾನ ಪಡೆದ ಮಕ್ಕಳು


ಅಬ್ದುಲ್ ಕಲಾಂ ಪಾತ್ರ ಮಾಡಿದ ವಿದ್ಯಾರ್ಥಿಯೊಬ್ಬನ ಜೊತೆ ನಮ್ಮ ಶಾಲೆಯ ಮಕ್ಕಳು




ಪ್ರತಿಭಾಕಾರಂಜಿ 2015

ದಿನಾಂಕ 03-09-2015ರ ಗುರುವಾರ ಹುಲ್ಲಹಳ್ಳಿ ಹೋಬಳಿ ಮಟ್ಟದ ಪ್ರತಿಭಾಕಾರಂಜಿ ಹುಲ್ಲಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜರುಗಿತು. ಮತ್ತದೇ ತೀರ್ಪುಗಾರರೆಸಗುವ ತಾರತಮ್ಯಕ್ಕೆ ಮಕ್ಕಳು, ಶಿಕ್ಷಕರು ಮುನಿಸಿಕೊಂಡು ಪ್ರತಿಭೆಗೆ ಸಂದದ್ದು ಅನ್ನುವುದಕ್ಕಿಂತಲೂ ಅವರಿಗೆ ಬೇಡವೆನಿಸಿ ಕೊಟ್ಟದ್ದನ್ನು ಪಡೆದುಕೊಂಡು ಹಿಂತಿರುಗಿದ್ದಾರೆ. 


 ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿದ್ದ ನಮ್ಮ ಶಾಲೆಯ ಮಕ್ಕಳು


 ಧಾರ್ಮಿಕ ಪಠಣಕ್ಕೆ ಮೂರನೇ ಬಹುಮಾನ ಪಡೆದ 10ನೇ ತರಗತಿ ಲೋಕೇಶ ಎಚ್. ಎಂ.

 ಚರ್ಚಾ ಸ್ಪರ್ಧೆಯಲ್ಲಿ ಮೂರನೆ ಬಹುಮಾನ ಪಡೆದ 10ನೇ ತರಗತಿ ದೀಪಿಕಾ ಎಚ್. ಪಿ.

 ನಾಟಕದಲ್ಲಿ ಮೊದಲನೆ ಬಹುಮಾನ ಪಡೆದ ತಂಡ : ಲೋಕೇಶ ಎಚ್. ಎಂ. (10), ರಾಜು ಕೆ. (10), ಚಂದನ್ ಕೆ. ಎಸ್. (9), ಮಲ್ಲಿಕಾರ್ಜುನ ಎಚ್. ಪಿ. (9), ಸಹನ ಜೆ. (8), ಸೌಂದರ್ಯ ಎಂ. ವಿ. (8), ಅನುಷ ಎನ್. (8), ಯೋಗೀಶ ಎಚ್. ಎ. (8)


 ಯೋಗಾಸನದಲ್ಲಿ ದ್ವಿತೀಯ ಬಹುಮಾನ ಸಂತೋಷ ಎಸ್. (10)


 ಛದ್ಮವೇಷಕ್ಕೆ ದ್ವಿತೀಯ ಬಹುಮಾನ ಕೃಷ್ಣ ಜಿ. (8)

ಛದ್ಮವೇಷಕ್ಕೆ ತಯಾರಾಗುತ್ತಾ ಕೃಷ್ಣ ಜಿ.


 ಜಾನಪದಗೀತೆಗೆ ಮೂರನೇ ಬಹುಮಾನ ನಿರಂಜನ ಎಚ್. ಎಂ. (10)


 ರಸಪ್ರಶ್ನೆಗೆ ಮೊದಲ ಬಹುಮಾನ ಪಡೆದ ತಂಡ : ಮಂಜುನಾಥ (9), ವಸಂತಕುಮಾರ (10), ದೀಪಿಕಾ ಎಚ್. ಪಿ. (10), ಶೀಲಾ ಎಂ. ಎಸ್. (10)


 ರಂಗೋಲಿಗೆ ಮೂರನೇ ಬಹುಮಾನ ಚೈತ್ರ ಎನ್. (9)

ಮಣ್ಣಿನ ಮಾದರಿಗೆ ಮೂರನೆ ಬಹುಮಾನ ವಸಂತಕುಮಾರ ಡಿ. ಪಿ. (10)


ಪ್ರಬಂಧ ಬರೆಯುತ್ತಾ ಪ್ರಿಯಾಂಕ ಕೆ. ಎಂ. (10)


ತನ್ನ ರಂಗೋಲಿಯೊಂದಿಗೆ ಚೈತ್ರ ಎನ್.
ಕೋಲಾಟ ತಂಡ : ಕಾವ್ಯ ಎಂ. ಆರ್., ಕೀರ್ತನಾ ಪಿ., ಕೀರ್ತನಾ ಎಚ್. ಕೆ., ಚಂದ್ರಿಕಾ ಜಿ., ಸೌಮ್ಯ, ಕಾವ್ಯ ಎನ್. (ಎಲ್ಲರೂ 9ನೇ ತರಗತಿ)

ಜಾನಪದ ನೃತ್ಯ ತಂಡ: ಲತಾ, ಭಾಗ್ಯಲಕ್ಷ್ಮಿ, ಕುಸುಮ, ಸಂಗೀತ ಎಸ್., ನಾಗರತ್ನ, ಮೇಘನ, ವೇದಾ ಎನ್. ಆರ್., ಪೂರ್ಣಿಮ ಮತ್ತು ಚೈತ್ರ (ಎಲ್ಲರೂ 10ನೇ ತರಗತಿಯವರು)